ಪೆನ್‌ಡ್ರೈವ್‌ ಪ್ರಕರಣದ ಕುರಿತು ತನಿಖೆ ನಡೆಸಲು ಕರ್ನಾಟಕ ಪೊಲೀಸರಿಂದ ಸಾಧ್ಯವಿಲ್ಲ: ಜಿ.ಟಿ ದೇವೇಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯ, ಮೈಸೂರು, ರಾಮನಗರ, ದೇವನಹಳ್ಳಿ, ಹುಬ್ಬಳ್ಳಿ, ಗದಗದಲ್ಲಿ ಸಿಎಂ-ಡಿಸಿಎಂ ವಿರುದ್ಧ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿ.ಟಿ ದೇವೇಗೌಡ ಮತ್ತು ಸಾರಾ ಮಹೇಶ್ ನೇತೃತ್ವದಲ್ಲಿ ಮೈಸೂರಿನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪೆನ್‌ಡ್ರೈವ್‌ ಹಂಚಿಕೆ ಮಾಡಲು ಚೆನ್ನೈನ ಕಂಪನಿಯೊಂದರಲ್ಲಿ 3 ಕೋಟಿ ರೂ.ಗೆ ಪೆನ್‌ಡ್ರೈವ್‌ ಖರೀದಿಸಿದ್ದಾರೆ ಎಂದು ಜಿಟಿ ದೇವೇಗೌಡರು ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರಯೋಗಾಲಯದಲ್ಲಿ ಯಾವುದನ್ನ ಸೇರಿಸಬೇಕು ಅದನ್ನ ಸೇರಿಸಿ ಸಿನಿಮಾ ಮಾಡಿದಂತೆ ಮಾಡಿದ್ದಾರೆ. ಅಲ್ಲಿಂದ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಜಾಲ ಸೇರಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!