ಪ್ಲೇ ಆಫ್​​ ರೇಸ್​ನಲ್ಲಿರೋ ಆರ್​​ಸಿಬಿ ಟೀಮ್​ಗೆ ಶಾಕ್​ ಕೊಟ್ಟ ಕ್ಯಾಪ್ಟನ್! ಇಲ್ಲಿದೆ ರೋಚಕ ಸುದ್ದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಬಹುನಿರೀಕ್ಷಿತ 17 ನೇ ಸೀಸನ್ ಅರ್ಧ ಮುಗಿದಿದೆ. ಅರ್ಧ ಋತುವಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಮೂರು ಪಂದ್ಯಗಳನ್ನು ಗೆದ್ದು ಪ್ರಬಲ ಪುನರಾಗಮನ ಮಾಡಿದೆ.

ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ರೋಚಕ ಪಂದ್ಯಕ್ಕೆ ಧರ್ಮಶಾಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಪಂದ್ಯವನ್ನು ಗೆಲ್ಲಲು ಆರ್‌ಸಿಬಿ ಕಠಿಣ ತಯಾರಿ ನಡೆಸಿದ್ದು. ಇದೇ ವೇಳೆ ಆರ್ಸಿಬಿ ನಾಯಕ ಫಾಫ್​ ಡುಪ್ಲೆಸಿಸ್ ಬಿಗ್ ಶಾಕ್ ನೀಡಿದ್ದಾರೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ ಅಲಭ್ಯತೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಳೆದ ಪಂದ್ಯದಲ್ಲಿ ಫಾಫ್​ ಡುಪ್ಲೆಸಿಸ್ ಗಾಯಗೊಂಡಿದ್ದು, ನಾಳೆ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಲಭ್ಯರಾಗೋದು ಡೌಟ್​ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!