ಕಾವೇರಿ ವಿವಾದ: ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ(ಕೆಆರ್‌ಎಸ್‌) ಅಣೆಕಟ್ಟಿನಿಂದ ಕರ್ನಾಟಕ ಸರ್ಕಾರ  ರಾತ್ರೋರಾತ್ರಿ ತಮಿಳುನಡನಾಡಿಗೆ ಮತ್ತೆ ನೀರು ಬಿಡುಗಡೆ ಮಾಡಿದೆ. ನಿನ್ನೆ ರಾತ್ರಿಯಿಂದಲೇ 5000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವ ಕಾರ್ಯ ಆರಂಭವಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶದ ಮೇರೆಗೆ ಇದೀಗ ಮತ್ತೆ ಕಾವೇರಿಯನ್ನು ತಮಿಳುಆಡಿನತ್ತ ಹರಿಸುತ್ತಿದೆ.

ಸೆಪ್ಟೆಂಬರ್  12ರ ಆದೇಶ ಜಾರಿಗೆ ಬರುವಂತೆ ಮುಂದಿನ 15 ದಿನಗಳವರೆಗೆ 5000 ಕ್ಯೂಸೆಕ್ ನೀರು ಪೂರೈಕೆ ಮುಂದುವರಿಸುವಂತೆ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ನಿರ್ಧರಿಸಲಾಯಿತು.

ಸಿಡಬ್ಲ್ಯುಎಂಎ ಆದೇಶದ ಮೇರೆಗೆ ಇದೀಗ ಕರ್ನಾಟಕ ಸರ್ಕಾರ ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದೆ. CWMAಯ ಮುಂದಿನ ಸಭೆ ಸೆಪ್ಟೆಂಬರ್ 26 ರಂದು ನಡೆಯಲಿದೆ.

ತಮಿಳುನಾಡಿಗೆ ನೀರು ಹರಿಸುವುದನ್ನು ನಿರಾಕರಿಸಲು ಕರ್ನಾಟಕ ತನ್ನ ರಾಜ್ಯದ ಕೆಲವು ಭಾಗಗಳಲ್ಲಿ ತೀವ್ರ ಬರಗಾಲ ಸ್ಥಿತಿಯನ್ನು ಸಮಿತಿ ಮುಂದಿಟ್ಟರೂ, ನೀರು ಸರಬರಾಜಿನ ವಿಚಾರದಲ್ಲಿ ನೆರೆ ರಾಷ್ಟ್ರಕ್ಕೆ ಸುಳ್ಳು ಹೇಳುತ್ತಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸುತ್ತಿರುವುದಕ್ಕೆ ಮಂಡ್ಯ ಭಾಗದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!