ಕೊಹ್ಲಿ ವಿಡಿಯೋದಿಂದ ಸರ್ಕಾರಕ್ಕೆ ಸಂಕಷ್ಟ! ಹೈಕೋರ್ಟ್‌ನಿಂದ ನೊಟೀಸ್ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಮಕ್ಕಳಿಗೆ ಮೈದಾನದ ಕೊರತೆ ಇರುವ ಬಗ್ಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಕ್ಕಳಿಗೆ ಆಟ ಆಡಲು ಮೈದಾನಗಳಿಲ್ಲದ ಸ್ಥಿತಿ ಬಗ್ಗೆ ಕೊಹ್ಲಿ ವಿಡಿಯೋದಲ್ಲಿ ಮಾತನಾಡಿದ್ದು, ವಿಡಿಯೋ ಹೈಕೋರ್ಟ್ ಗಮನಸೆಳೆದಿದೆ.

ಉತ್ತರಾಖಂಡ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ್ದು, ಮೋದಿ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ದೇಶದಲ್ಲಿ ಮಕ್ಕಳಿಗೆ ಕ್ರೀಡಾ ಮೈದಾನದ ಕೊರತೆ ಇದೆ, ಸ್ಥಳಾವಕಾಶದ ಕೊರತೆಯಿಂದಾಗಿ ಮಕ್ಕಳು ರಸ್ತೆಯಲ್ಲಿ ಆಟವಾಡಬೇಕಾದ ಪರಿಸ್ಥಿತಿ ಇದೆ. ಯಾವೆಲ್ಲಾ ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಾರೆ ಎನ್ನುವ ಕುರಿತಾದ ವಿಡಿಯೋ ಇದಾಗಿದೆ. ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!