May 30, 2026
Saturday, May 30, 2026
spot_img

ಕರ್ನಾಟಕ SSLC ಪರೀಕ್ಷೆ-2 ಫಲಿತಾಂಶ ಪ್ರಕಟ: ಶೇ. 62 ರಷ್ಟು ವಿದ್ಯಾರ್ಥಿಗಳು ಪಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ರ ಬಹುನಿರೀಕ್ಷಿತ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಪರೀಕ್ಷೆ ಬರೆದಿದ್ದ ಒಟ್ಟು 49,351 ವಿದ್ಯಾರ್ಥಿಗಳ ಪೈಕಿ 31,080 ವಿದ್ಯಾರ್ಥಿಗಳು ಯಶಸ್ವಿಯಾಗಿ ತೇರ್ಗಡೆಯಾಗಿದ್ದು, ಒಟ್ಟಾರೆ ಶೇಕಡಾ 62 ರಷ್ಟು ಫಲಿತಾಂಶ ದಾಖಲಾಗಿದೆ. ಮೇ 18 ರಿಂದ 25 ರವರೆಗೆ ರಾಜ್ಯದ 358 ಪರೀಕ್ಷಾ ಕೇಂದ್ರಗಳಲ್ಲಿ ಈ ದ್ವಿತೀಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ವಿಶೇಷವೆಂದರೆ, ಈಗಾಗಲೇ ಪಾಸ್ ಆಗಿದ್ದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ ಬರೆದಿದ್ದ 8,385 ಶಾಲಾ ವಿದ್ಯಾರ್ಥಿಗಳು ತಮ್ಮ ಒಟ್ಟು ಫಲಿತಾಂಶವನ್ನು ಉತ್ತಮಪಡಿಸಿಕೊಂಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶದ ಹೈಲೈಟ್ಸ್:

ಇದಕ್ಕೂ ಮುನ್ನ ಪ್ರಕಟವಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶದಲ್ಲಿ ಶೇ 94.1 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಪರೀಕ್ಷೆ ಬರೆದಿದ್ದ 7,70,209 ವಿದ್ಯಾರ್ಥಿಗಳಲ್ಲಿ 7,24,794 ಮಕ್ಕಳು ಉತ್ತೀರ್ಣರಾಗಿದ್ದರು. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ 96.18 ರಷ್ಟು ಹುಡುಗಿಯರು ಮತ್ತು ಶೇ 91.94 ರಷ್ಟು ಹುಡುಗರು ಪಾಸ್ ಆಗಿದ್ದರು.

ಜಿಲ್ಲಾವಾರು ಟಾಪ್ ರ‍್ಯಾಂಕಿಂಗ್:

ಮೊದಲ ಸ್ಥಾನ: ದಕ್ಷಿಣ ಕನ್ನಡ ಜಿಲ್ಲೆ (ಶೇ 98.40)

ದ್ವಿತೀಯ ಸ್ಥಾನ: ಉಡುಪಿ ಜಿಲ್ಲೆ (ಶೇ 98.18)

ತೃತೀಯ ಸ್ಥಾನ: ಉತ್ತರ ಕನ್ನಡ (ಶೇ 98.09)

ನಾಲ್ಕನೇ ಸ್ಥಾನ: ಹಾಸನ ಜಿಲ್ಲೆ (ಶೇ 97.51)

ಈ ಬಾರಿ SSLC 3ನೇ ಪರೀಕ್ಷೆ ಇರುವುದಿಲ್ಲ!

ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಬಾರಿ ಎಸ್‌ಎಸ್‌ಎಲ್‌ಸಿ ಮೂರನೇ ಪರೀಕ್ಷೆ ಇರುವುದಿಲ್ಲ. ಪರೀಕ್ಷೆ-1 ರಲ್ಲೇ ಅತ್ಯುತ್ತಮ ಫಲಿತಾಂಶ ಬಂದಿರುವುದರಿಂದ ಈ ಸಾಲಿನಲ್ಲಿ 3ನೇ ಪರೀಕ್ಷೆ ನಡೆಸುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !