ಕರ್ನಾಟಕ ರಾಜ್ಯ ಸರ್ವ ಧರ್ಮಗಳ ಸಾಮರಸ್ಯದ ತಾಣ : ಸಚಿವ ಶಿವರಾಮ ಹೆಬ್ಬಾರ್ ಬಣ್ಣನೆ

ಹೊಸದಿಗಂತ ವರದಿ ಹಾವೇರಿ :

ಹಲವು ಧರ್ಮ, ಜಾತಿ, ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ಕರ್ನಾಟಕ ರಾಜ್ಯ ಇಂದು, ಮುಂದು, ಎಂದೆಂದೂ ಎಲ್ಲಾ ಜಾತಿ, ಧರ್ಮ, ಶ್ರದ್ಧೆಗಳ ಜನರು ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು ಎಂಬ ಉದಾತ್ತ ಭಾವವನ್ನು ಯಾವತ್ತೂ ಜೀವಂತವಾಗಿರಿಸಿ ಸುಂದರ ಹೊಸ ನಾಳೆಯ ನಿರ್ಮಾಣಕ್ಕೆ ಪಣತೋಡೋಣ ಎಂದು ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಕರೆ ನೀಡಿದರು.

ನಗರದ ಸಿದ್ದಪ್ಪ ಹೊಸಮನಿ ಜಿಲ್ಲಾ ಕ್ರೀಡಾಂಗಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಮಾಗಮ ಮತ್ತು ಅನೇಕ ರಾಜ ಮಹಾರಾಜರುಗಳು ಆಳುವ ಮೂಲಕ ನಾಡಿನ ಭವ್ಯತೆಯನ್ನು ಉಳಿಸಿದ್ದಾರೆ ಮತ್ತು ಹೆಚ್ಚಿಸಿದ್ದಾರೆ ಎಂದರು.

ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡ ನಾಡಿಗಾಗಿ ನಡೆದ ಏಕತೆಯ ಯತ್ನದ ಫಲವಾಗಿ 1956ರಲ್ಲಿ ಕನ್ನಡ ಭಾಷಿಕರೆಲ್ಲರು ಒಂದೆಡೆ ಇರುವಂತೆ ವಿಶಾಲ ಮೈಸೂರು ರಾಜ್ಯ ರಚನೆಯಾಯಿತು. ನಂತರ ಡಿ.ದೇವರಾಜ ಅರಸು ಅವರು 1973 ನ.1ರಂದು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಕರ್ನಾಟಕ ರಾಜ್ಯ ಉದಯವಾಗಿ ಇಂದಿಗೆ 66 ವರ್ಷಗಳು ಪೂರ್ಣಗೊಂಡು 67ನೇ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಕರ್ನಾಟಕ ಏಕೀಕರಣಕ್ಕಾಗಿ ದುಡಿದವರ ಸಂಖ್ಯೆ ಅಸಂಖ್ಯಾತ. ಕನ್ನಡ ಭಾಷೆ, ಸಂಸ್ಕೃತಿಯ ಶ್ರೀಮಂತಿಕೆಗೆ ದುಡಿದ ಏಕೀಕೃತ ಕರ್ನಾಟಕದ ಕನಸು ಕಂಡ ಈ ಚೇತನಗಳು, ಏಕೀಕರಣದ ಆನಂತರದ ಕರ್ನಾಟಕವನ್ನು ಕಟ್ಟಲು ತಮ್ಮ ಅಸೀಮ ಸೇವೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅನಂತ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಸಲ್ಲಿಸಬಯಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ ಸಿಇಒ ಮಹಮ್ಮದ ರೋ?ನ್, ಪೊಲೀಸ್ ವರಿ?ಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹಾವೇರಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೇಗಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!