“ನೀರಿಲ್ಲ, ಆಹಾರವಿಲ್ಲ” – ಉಕ್ರೇನಿನಲ್ಲಿ ಕರ್ನಾಟಕ ವಿದ್ಯಾರ್ಥಿಯ ಅಳಲು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕರ್ನಾಟಕದ ಪ್ರವೀಣ್ ಅಜ್ಜರಾಡಿ ಎಂಬ ವಿದ್ಯಾರ್ಥಿ ಉಕ್ರೇನಿನಿಂದ ವಿಡಿಯೊ ಸಂದೇಶವೊಂದನ್ನು ಬಿತ್ತರಿಸಿದ್ದಾಗಿ ನ್ಯೂಸ್ 18 ವರದಿ ಮಾಡಿದೆ.

ಫೆಬ್ರವರಿ 15ರಂದೇ ಭಾರತದ ವಿದೇಶ ಸಚಿವಾಲಯವು ಉಕ್ರೇನ್ ನಲ್ಲಿರುವ ಭಾರತೀಯರಿಗೆ ಹಿಂತಿರುಗುವುದಕ್ಕೆ ಸೂಚನೆ ನೀಡಿ ಅದಕ್ಕೆ ವ್ಯವಸ್ಥೆಯನ್ನೂ ಮಾಡಿತ್ತು. ಆದರೆ ಆಗ ದೇಶದ ಸಲಹೆಯನ್ನು ಕಡೆಗಣಿಸಿ ಅಲ್ಲೇ ಉಳಿದವರು ಈಗ ಮತ್ತೆ ಭಾರತೀಯ ರಾಯಭಾರ ಕಚೇರಿಯನ್ನು ದೂರಿಕೊಂಡಿದ್ದಾರೆ.

ಪ್ರವೀಣ್ ಅಜ್ಜರಾಡಿ ಹೇಳಿರುವುದು- “ಉಕ್ರೇನ್ ನ ಖಾರ್ಕಿವ್ ನಗರದಲ್ಲಿದ್ದೇನೆ. ಯುದ್ಧವಾಗುತ್ತಿದೆ. ನೀರು-ಆಹಾರಗಳ ಕೊರತೆ ಎದುರಾಗಿದೆ. ಭಾರತೀಯ ರಾಯಭಾರ ಕಚೇರಿ ನಮಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಕರ್ನಾಟಕದಿಂದ ಸುಮಾರು 100 ವಿದ್ಯಾರ್ಥಿಗಳು ಇದ್ದೇವೆ.”

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!