ಕೊರೋನಾ ಎಫೆಕ್ಟ್: ಶಾಲೆಗಳ ಬೇಸಿಗೆ ರಜೆ ಕಡಿತಗೊಳಿಸಿದ ಶಿಕ್ಷಣ ಇಲಾಖೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡು ವರ್ಷದಿಂದ ಕೋವಿಡ್‌ನಿಂದ ಕಲಿಕೆ ಪ್ರಕ್ರಿಯೆ ಕುಂಠಿತವಾಗಿದ್ದು, ಇದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಬೇಸಿಗೆ ರಜೆ ಅವಧಿಗೆ ಕತ್ತರಿ ಹಾಕಿದೆ.

ಸಾಮಾನ್ಯವಾಗಿ ಬೇಸಿಗೆ ರಜೆ ಏಪ್ರಿಲ್ ಮೊದಲ ವಾರದಿಂದ ಪ್ರಾರಂಭವಾಗಿ ಮೇ ಅಂತ್ಯದವರೆಗೂ ಇರುತ್ತದೆ. ಜೂನ್ ಮೊದಲ ವಾರದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಆದರೆ ಈ ವರ್ಷ ಶೈಕ್ಷಣಿಕ ರಜೆಯನ್ನು 36 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಈ ಬಾರಿಯ ಹೊಸ ಶೈಕ್ಷಣಿಕ ವರ್ಷ ಮೇ 16 ರಿಂದಲೇ ಪ್ರಾರಂಭವಾಗಲಿದೆ. ಕಳೆದ ಎರಡು ವರ್ಷದ ಕೋವಿಡ್‌ನಿಂದ ಕುಂಠಿತವಾದ ಕಲಿಕೆಯನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಮೇ.29 ರಿಂದ ಆರಂಭವಾಗಿ ಏಪ್ರಿಲ್ 10 ಕ್ಕೆ ಮುಕ್ತಾಯವಾಗುತ್ತದೆ. ಪ್ರತಿ ಸಾಲಿನ ಶೈಕ್ಷಣಿಕ ಚಟುವಟಿಕೆಗಳು 10 ತಿಂಗಳ ಕಾಲ ನಡೆಯಲಿದ್ದು, ಕನಿಷ್ಠ 220 ಶಾಲಾ ಕರ್ತವ್ಯದ ದಿನಗಳು ಇರಲಿವೆ. ಇದರ ಅನ್ವಯ ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಆದರೆ ಕೊರೋನಾ ಕಾರಣದಿಂದ ನಿಗದಿಪಡಿಸಿದಷ್ಟು ದಿನ ಶಾಲೆ ನಡೆಸಲು ಕಷ್ಟವಾಗಿದೆ. ಈ ಕಾರಣದಿಂದ ಶಿಕ್ಷಣ ಇಲಾಖೆ ಬೇಸಿಗೆ ರಜೆಗೆ ಕತ್ತರಿ ಹಾಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!