ಕರ್ನಾಟಕದಲ್ಲಿ ಪ್ರಪಂಚದ ಅತಿದೊಡ್ಡ ಎಲೆಕ್ಟ್ರಿಕ್ ತ್ರಿ-ವೀಲರ್ ಉತ್ಪಾದನಾ ಘಟಕ ಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಉತ್ಪಾದನಾ ಘಟಕದ ತವರಾಗಲಿದೆ, ಎಂದು EV ತಯಾರಕ ಒಮೆಗಾ ಸೀಕಿ ಮೊಬಿಲಿಟಿ ಸಂಸ್ಥೆ ಶುಕ್ರವಾರ (22 ಏಪ್ರಿಲ್) ತಿಳಿಸಿದೆ.

250 ಎಕರೆ ಭೂಮಿಯಲ್ಲಿ‌, 250 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಅತಿದೊಡ್ಡ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ. ಸುಮಾರು 10 ಲಕ್ಷ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಮೂರು ಹಂತಗಳಲ್ಲಿ ನಿರ್ಮಾಣವಾಗಲಿರುವ ಘಟಕದಲ್ಲಿ Rage+, Rage+ rapid EV, Rage+ Frost, Rage+Swap and Rage+Tipper ಹಾಗೂ ಒಎಸ್‌ಎಂ ಅನ್ನು ಪರಿಚಯಿಸಲಿದ್ದಾರೆ.

ಸಂಘಟಿತ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ 200 ಪ್ರತಿಶತದಷ್ಟು ಬೃಹತ್ ಪ್ರಮಾಣದಲ್ಲಿ ಬೆಳೆದಿದೆ ಎಂದು OSM ಅಧ್ಯಕ್ಷ ಮತ್ತು ಸಂಸ್ಥಾಪಕ ಉದಯ್ ನಾರಂಗ್ ಅಭಿಪ್ರಾಯಪಟ್ಟಿದ್ದಾರೆ. 1 ಮಿಲಿಯನ್ ಯೂನಿಟ್‌ಗಳ ಸಾಮರ್ಥ್ಯ ಹೊಂದಿರುವ ಘಟಕ ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ. ಈ ಘಟಕವು ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಜಾಗತಿಕ ನಾಯಕನಾಗುವ ಗುರಿಯತ್ತ ಇದು ಮೊದಲ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಈ ಮೆಗಾ ಪ್ಲಾಂಟ್‌ನ ಸಮೀಪದಲ್ಲಿ ಪೂರಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು, ಅಸ್ತಿತ್ವದಲ್ಲಿರುವ ಹಾಗೂ ಹೊಸ ಪೂರೈಕೆದಾರರೊಂದಿಗೆ ಎಲೆಕ್ರ್ಟಿಕ್‌ ವಾಹನ ತಯಾರಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ಕರ್ನಾಟಕವು ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ, EV ಬಳಕೆ ಇತ್ತೀಚೆಗೆ 1 ಲಕ್ಷ ಮೈಲಿಗಲ್ಲನ್ನು ದಾಟಿದೆ ಎಂದು ವರದಿಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಾರ, ಕರ್ನಾಟಕವು ಏಪ್ರಿಲ್ 15 ರವರೆಗೆ 100,432 ಇವಿಗಳನ್ನು ನೊಂದಾಯಿಸಿದೆ, ಮೊದಲ ಸ್ಥಾನದಲ್ಲಿ ಉತ್ತರ ಪ್ರದೇಶ (3 ಲಕ್ಷ ಇವಿ) ಮತ್ತು ದೆಹಲಿ (1.4 ಲಕ್ಷ) ವಾಹನಗಳನ್ನು ಹೊಂದಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!