Wednesday, September 27, 2023

Latest Posts

ಬಸ್‌ಗಳಲ್ಲಿ ಬರೀ ಹೆಂಗಳೆಯರದ್ದೇ ಹವಾ! ಗಂಡಸರಿಗೆ ರಿಸರ್ವೇಶನ್ ಕೊಟ್ಟ ಮೊದಲ ರಾಜ್ಯ ಕರ್ನಾಟಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ನಿನ್ನೆಯಷ್ಟೇ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಗ್ಯಾರೆಂಟಿ ಮಾಡಿದ್ದು, ಗಂಡಸರಿಗೆ ತಲೆನೋವು ಶುರುವಾಗಿದೆ.

ಇನ್ಮುಂದೆ ಮೆಟ್ರೋ, ಕ್ಯಾಬ್‌ನಲ್ಲಿ ಓಡಾಡೋ ಮಹಿಳೆಯರೆಲ್ಲಾ ಬಸ್‌ಗಳಲ್ಲೇ ಕಾಣಿಸಲಿದ್ದು, ಬಸ್ ತುಂಬಾ ಹೆಂಗಸರೇ ಕಾಣಿಸೋದ್ರಲ್ಲಿ ಅನುಮಾನವೇ ಇಲ್ಲ. ಫ್ರೀ ಪ್ರಯಾಣ ಘೋಷಣೆಗೂ ಮುನ್ನ ಮಹಿಳೆಯರಿಗೆ ಸೀಟು ಬಿಟ್ಟುಕೊಡುತ್ತಿದ್ದ ಪುರುಷರು, ಇದೀಗ ಸೀಟ್ ಇಲ್ಲದೆ ನಿಂತುಕೊಂಡೇ ಪ್ರಯಾಣ ಮಾಡೋದಕ್ಕೆ ಮೆಂಟಲಿ ಪ್ರಿಪೇರ್ ಆಗಿದ್ದಾರೆ.

ಆದರೆ ಗಂಡಸರ ಕಷ್ಟ ಅರ್ಥಮಾಡಿಕೊಂಡ ಸರ್ಕಾರ ಗಂಡಸರಿಗಾಗಿ ಶೇ.50 ರಷ್ಟು ಆಸನವನ್ನು ಸೀಮಿತವಾಗಿ ಇಟ್ಟಿದೆ. ಈಗ ‘ಹೆಂಗಸರಿಗೆ ಮಾತ್ರ’, ಬೋರ್ಡ್ ಬದಲು ‘ಗಂಡಸರಿಗೆ ಮಾತ್ರ’ ಬೋರ್ಡ್ ಕಾಣಿಸಲಿದೆ. ಗಂಡುಮಕ್ಕಳ ಸೀಟ್‌ನಲ್ಲಿ ಹೆಂಗಸರು ಕುಳಿತಿದ್ರೆ ಇದು ನಮ್ಮ ಹಕ್ಕು ಎದ್ದೇಳಿ ನಾವು ಕೂರ‍್ತೀವಿ ಎಂದು ಹೇಳುವ ಹಕ್ಕು ಗಂಡುಮಕ್ಕಳಿಗಿದೆ.

ದೇಶದಲ್ಲಿ ಗಂಡುಮಕ್ಕಳಿಗೆ ಬಸ್‌ಗಳಲ್ಲಿ ರಿಸರ್ವೇಶನ್ ನೀಡಿರುವ ಹಿಸ್ಟರಿಯೇ ಇಲ್ಲ, ಹೆಂಗಸರಿಗೆ ಮಾತ್ರ ಎನ್ನುವ ಬರವಣಿಗೆ ಸೀಟ್ ಮೇಲೆ ಕಾಣಿಸುತ್ತಿತ್ತು. ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಗಂಡಸರಿಗೆ ಬಸ್‌ಗಳಲ್ಲಿ ಆಸನ ಮೀಸಲಿರಿಸಿದ್ದು ನಮ್ಮ ಸರ್ಕಾರ. ಈ ವ್ಯವಸ್ಥೆ ಮೊದಲು ಬಂದಿದ್ದು ಕರ್ನಾಟಕದಲ್ಲಿ.

ಜೂ.11ರಿಂದ ಯೋಜನೆ ಜಾರಿಗೆ ಬರಲಿದ್ದು,ಬಿಎಂಟಿಸಿ ಬಸ್‌ಗಳಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಟಿಕೆಟ್ ಪಡೆದು ಪ್ರಯಾಣಿಸುವ ಗಂಡಸರಿಗೆ ಸಮಸ್ಯೆ ಆಗದಿರಲಿ ಎಂದು ಹಾಗೇ ಆದಾಯಕ್ಕೆ ಪುರುಷರಷ್ಟೇ ಮೂಲ ಎನ್ನುವ ಕಾರಣದಿಂದ ಈ ನಿಯಮ ಜಾರಿಗೆ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!