Saturday, February 4, 2023

Latest Posts

ಕರ್ನಾಟಕ ಯಾರಪ್ಪನ ಮನೆ ಸ್ವತ್ತು ಅಲ್ಲ: ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ಧಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಸಿಟಿ ರವಿ ಮನೆ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದೇನೆ, ಇದು ಬೈಗುಳನಾ? ಅದು ಬೈಗುಳ ಅಲ್ಲ ಅಂದಮೇಲೆ ನಿಮಗೆ ಯಾಕೆ ಉರಿ? ಅದು ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದು ಎಂದು ತಿರುಗೇಟು ನೀಡಿದ್ದಾರೆ.

ನೀವು ಪ್ರಧಾನಿಗೆ ರಾವಣ, ನರಹಂತಕ, ಕೊಲೆಗಡುಕ ಎಂದು ಹೇಳುತ್ತೀರಾ. ಈ ಪ್ರಜಾಪ್ರಭುತ್ವದಲ್ಲಿ ಬೆದರಿಕೆ ನಡೆಯೋಲ್ಲ, ನಾನೊಬ್ಬ ಸಾಮಾನ್ಯ ರೈತನ ಮಗ, ಪಾಳೇಗಾರ ಮನೆತನದವನಲ್ಲ, ಪಾಳೇಗಾರರು ಇಂತಹ ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದು ಎಂಬಿ ಪಾಟೀಲ್ ವಿರುದ್ಧ ರವಿ ಕಿಡಿಕಾರಿದ್ದಾರೆ.

ನಾವು ನಿನ್ನಷ್ಟು ಶ್ರೀಮಂತ್ರಿಕ ಇಲ್ಲ ಎಂಬುದು ಗೊತ್ತು, ನಿನ್ನ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯೋಲ್ಲ, ಕರ್ನಾಟಕ ಯಾರಪ್ಪನ ಮನೆ ಸ್ವತ್ತು ಅಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.

ಸಿ.ಟಿ. ರವಿ ಅವರು ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ್ದು ಸರಿಯಲ್ಲ, ಸಿ.ಟಿ. ರವಿ ಸಿದ್ದರಾಮಯ್ಯ ಬಗ್ಗೆ ರಾಜಕೀಯವಾಗಿ ಮಾತನಾಡಬೇಕು. ಆದರೆ ಸಿದ್ರಾಮುಲ್ಲಾಖಾನ್ ಎಂದು ಹೇಳುವುದು ಸರಿಯಲ್ಲಎಂದು ಎಂಬಿ ಪಾಟೀಲ್ ಎಚ್ಚರಿಕೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!