ಬಿಗ್ ಬಾಸ್ ವಿರುದ್ಧ ಬೇಸರ ಹೊರಹಾಕಿದ ಸನ್ಯಾ ಅಯ್ಯರ್: ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕನ್ನಡ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಮತ್ತು ಸನ್ಯಾ ಅಯ್ಯರ್ ನಡುವಿನ ಗೇಳೆತನ ಎಲ್ಲರಿಗೂ ತಿದಿರುತ್ತದೆ. ಅವರಿಬ್ಬರೂ ಓಟಿಟಿ ಯಿಂದ ಸೀಸನ್ ೯ಅಲ್ಲೂ ಜೊತೆಯಾಗಿದ್ದರು.

ಆದರೆ ಸನ್ಯಾ ಎಲಿಮಿನೇಟ್ ಆಗಿ ಹೊರಬಂದ ಕ್ಷಣ ರೂಪೇಶ್ ಶೆಟ್ಟಿ ತುಂಬಾ ನೊಂದಿದ್ದರು. ಅಲ್ಲದೆ ಸನ್ಯಾ ಅವರಲ್ಲಿ ವಿಶೇಷ ಬೇಡಿಕೆಯನ್ನು ಇಟ್ಟಿದ್ದರು. ಅದೇನೆಂದರೆ ಪ್ರ ಪ್ರತಿ ವಾರವೂ ನನಗೆ ರೆಡ್ ಶರ್ಟ್ ಅಥವಾ ಟೀ-ಶರ್ಟ್ ಕಳುಹಿಸಬೇಕು ಅದರಲ್ಲಿ ನಿನ್ನ ಪ್ರೀತಿ ತುಂಬಿರಬೇಕು ಎಂದಿದ್ದರು.


ಅದ್ರಂತೆ ಹೊರಬಂದ ಮೊದಲ ವಾರ ರೂಪೇಶ್ ಶೆಟ್ಟಿ ಗೆ ಡ್ರೆಸ್ ಕಳುಹಿಸಲಾಗಿತ್ತು. ಆದ್ರೆ ಆ ಬಳಿಕ ತಲುಪುತ್ತಿರಲಿಲ್ಲ. ಈ ಬಗ್ಗೆ ಸನ್ಯಾ ಬೇಸರ ಹೊರಹಾಕಿದ್ದಾರೆ. ಇದನ್ನು ರೂಪೇಶ್ ಮಾತ್ರವಲ್ಲ ಪ್ರತಿ ದಿನ ಎಪಿಸೋಡ್ ನೋಡುತ್ತಿರುವವರಿಗೂ ಗಮನಕ್ಕೆ ಬಂದಿದೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಸನ್ಯಾ , ರೂಪಿ ನೀನು ಸ್ಟ್ರಾಂಗ್ ಆಗಿರು ಆಯ್ತಾ ನಾನು ಕಳುಹಿಸುತ್ತಿರುವ ಶರ್ಟ್ಗಳನ್ನು ನಿನಗೆ ತಲುಪಿಸುತ್ತಿಲ್ಲ ಆದರೆ ಪಾರ್ಸಲ್ ಸ್ವೀಕರಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ನನ್ನ ಪಾಸಿಟಿವಿಟಿ ಮತ್ತು ಸಪೋರ್ಟ್ನ ಕಳುಹಿಸುತ್ತಿರುವೆ, ಇದನ್ನು ಯಾರಿಂದಲ್ಲೂ ಸ್ಟಾಪ್ ಮಾಡಲು ಆಗುವುದಿಲ್ಲ ಆಯ್ತಾ. ನನ್ನ ಬೆಸ್ಟಿ ಸದಾ ಶೈನ್ ಆಗುತ್ತಿರಬೇಕು ಎಂದು ಸಾನ್ಯ ಬರೆದುಕೊಂಡಿದ್ದಾರೆ.

ಈ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!