ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಜೀವದ ವೈರಿಯಾಗಿದೆ. ಅವರು ರೈತರಿಗೆ ಸುಳ್ಳು ಮಾತ್ರ ಹೇಳುತ್ತಾರೆ. ರೈತರಿಗೆ ನೀಡಿದ ಒಂದು ಭರವಸೆಯನ್ನು ಈಡೇರಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನಲೆ ಹಿಸ್ಸಾರ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹರಿಯಾಣದಲ್ಲಿ ಚುನಾವಣೆ ಕಾರಣಕ್ಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರೈತರಿಗೆ ದೊಡ್ಡ ದೊಡ್ಡ ಭರವಸೆ ನೀಡಿದೆ. ಆಕಾಶದಲ್ಲಿರುವ ನಕ್ಷತ್ರಗಳನ್ನು ತಂದು ಕೊಡುವ ಭರವಸೆ ನೀಡುತ್ತಿದ್ದಾರೆ. ಇಂತಹ ಭರವಸೆ ನೀಡುವ ಕಾಂಗ್ರೆಸ್ ನಾಯಕರಿಗೆ ಕೇಳಿ ಹರಿಯಾಣದಲ್ಲಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದೀರಿ. ಕರ್ನಾಟಕಣ ತೆಲಂಗಾಣ, ಹಿಮಾಲಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲಿ ಇಂತಹ ಯೋಜನೆ ಅನುಷ್ಠಾನ ಮಾಡಿ ತೋರಿಸಲು ಹೇಳಿ ಎಂದು ಕಿಡಿಕಾರಿದರು.
ಹರಿಯಾಣದ ಜನರು ಕಟ್ಟಾ ದೇಶಭಕ್ತರು. ಇಂದಿನ ಕಾಂಗ್ರೆಸ್ ಅರ್ಬನ್ ನಕ್ಸಲೀಯರ ಕಪಿಮುಷ್ಠಿಯಲ್ಲಿದೆ. ಕಾಂಗ್ರೆಸ್ ನಾಯಕರು ವಿದೇಶಕ್ಕೆ ಹೋದಾಗ ಯಾರನ್ನು ಭೇಟಿ ಮಾಡುತ್ತಾರೆ? ಭಾರತದ ಶತ್ರುಗಳ ಭಾಷೆ ಮಾತನಾಡುವವರನ್ನು ಭೇಟಿಯಾಗುತ್ತಾರೆ. ಪ್ರಪಂಚದಾದ್ಯಂತ ಭಾರತವನ್ನು ದೂಷಿಸುವಲ್ಲಿ ತೊಡಗಿಸಿಕೊಂಡಿರುವವರು ಕಾಂಗ್ರೆಸ್ ಅನ್ನು ಏಕೆ ಬೆಂಬಲಿಸುತ್ತಾರೆ ಎಂಬುದನ್ನು ನೀವು ಯೋಚಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಇಂದು ಸೆಪ್ಟೆಂಬರ್ 28. ಸೆಪ್ಟೆಂಬರ್ 28ರ ರಾತ್ರಿ ನಾವು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೆವು ಎಂಬುದನ್ನು ನೆನಪಿಸುತ್ತೇನೆ. ಕಾಂಗ್ರೆಸ್ ಏನು ಮಾಡಿದೆ? ಅವರು ನಮ್ಮ ಸೇನೆಯನ್ನು ಪುರಾವೆ ಕೇಳಿದರು. ನಮ್ಮ ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎಂದು ಕರೆದರು ಎಂದು ಹರಿಹಾಯ್ದರು.