ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗೋಸ್ಕರ ಅಭ್ಯರ್ಥಿಗಳು ಏನು ಮಾಡೋದಕ್ಕೂ ರೆಡಿಯಾಗಿದ್ದಾರೆ ಅನ್ನೋದಕ್ಕೆ ಇದೇ ಉದಾಹರಣೆ!
ಹೌದು, ಟಾಸ್ಕ್‌ಗಾಗಿ ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ತಮ್ಮ ತಲೆಕೂದಲನ್ನು ಬೋಳಿಸಿಕೊಂಡಿದ್ದಾರೆ. ಸಂಗೀತಾ ಕಾರ್ತಿಕ್ ತಂಡಕ್ಕೆ ಟಾಸ್ಕ್ ನೀಡಿದ್ದು, ತುಕಾಲಿ ಹಾಗೂ ಕಾರ್ತಿಕ್ ಕೂದಲನ್ನು ಬೋಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಾರ್ತಿಕ್ ಮುಖದಲ್ಲಿ ಅಸಮಾಧಾನ ಕಾಣಿಸಿದ್ರೂ ಕೂದಲು ಮತ್ತೆ ಬೆಳೆಯುತ್ತದೆ ಟಾಸ್ಕ್‌ಗಾಗಿ ಏನಾದ್ರೂ ಮಾಡ್ತೇನೆ ಎಂದು ಹೇಳಿ ಕೂದಲು ಬೋಳಿಸಿಕೊಂಡಿದ್ದಾರೆ. ಆತ ತನಿಷಾ ಇಬ್ಬರ ಬದಲು ಒಬ್ಬರಿಗೆ ಟಾಸ್ಟ್ ನೀಡಿ ಎಂದು ಮನವೊಲಿಸಲು ಬಂದಿದ್ದು, ಸಂಗೀತಾ ತನಿಷಾ ಮಧ್ಯೆ ಮಾತಿಗೆ ಮಾತಾಗಿದೆ. ಇನ್ಯಾವ ಸವಾಲುಗಳನ್ನು ಸ್ವೀಕರಿಸಿದ್ದಾರೆ ಅಂತ ನೋಡೋದಕ್ಕೆ ಇಂದಿನ ಎಪಿಸೋಡ್‌ಗೆ ಕಾಯಬೇಕಿದೆ.
ಟಾಸ್ಕಿಗಾಗಿ, ತಂಡಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ ಸ್ಪರ್ಧಿಗಳು!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada pic.twitter.com/ymYAsBT42i— Colors Kannada (@ColorsKannada) November 21, 2023