ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದ್ದು, ಕಾಂಗ್‌ಪೋಕ್ಪಿಯಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಐಆರ್‌ಬಿ ಯೋಧ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಲೀಮಾಂಖೋಂಗ್ ಮಿಷನ್ ವೆಂಗ್ ಗ್ರಾಮದ ಐಆರ್‌ಬಿ ಜವಾನ್ ಹೆನ್ಮಿನ್ಲೆನ್ ವೈಫೇಯ್ ಹಾಗೂ ಇಂಫಾಲ್ ಪಶ್ಚಿಮ ಜಿಲ್ಲೆಯ ಹುಂಖೋ ಕುಕಿ ಗ್ರಾಮದ ತಂಗ್ಮಿನ್ಲುನ್ ಹ್ಯಾಂಗ್ಸಿಂಗ್ ಮೃತರು.
ಹರಾಥೆಲ್ ಹಾಗೂ ಕೊಬ್ಶಾ ಗ್ರಾಮಗಳ ನಡುವೆ ಮಾರಣಾಂತಿಕ ದಾಳಿ ಸಂಭವಿಸಿದ್ದು, ದಾಳಿಯ ಸಂದರ್ಭದಲ್ಲಿ ಐಆರ್‌ಬಿ ಸಿಬ್ಬಂದಿ ವಾಹನದಲ್ಲಿ ಕುಳಿತಿದ್ದರು. ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಯೋಧ ಸೇರಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.