ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನಲ್ಲಿ ದೀಪಾವಳೆ ಹಂಗಾಮಾ ಶುರುವಾಗಿದೆ. ನಟ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ದೀಪಾವಳಿ ಪಾರ್ಟಿಯನ್ನು ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದು, ಅನೇಕ ಸೆಲೆಬ್ರೆಟಿಗಳು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಈ ಪಾರ್ಟಿಗೆ ಮಹೇಶ್-ನಮ್ರತಾ ದಂಪತಿ, ಜ್ಯೂ.ಎನ್‌ಟಿಆರ್-ಪ್ರಣತಿ, ವೆಂಕಟೇಶ್, ಸುಧೀರ್ ಬಾಬು ಫ್ಯಾಮಿಲಿ, ಮಂಚು ಲಕ್ಷ್ಮಿ ಸೇರಿದಂತೆ ಟಾಲಿವುಡ್ ಸ್ಟಾರ್ ಬಳಗವೇ ಪಾರ್ಟಿಯಲ್ಲಿತ್ತು. ಮಹೇಶ್ ಪತ್ನಿ ನಮ್ರತಾ ಶಿರೋಡ್ಕರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪಾರ್ಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಒಂದೇ ಫ್ರೇಮ್‌ನಲ್ಲಿ ಎನ್‌ಟಿಆರ್, ರಾಮ್ ಚರಣ್, ವೆಂಕಿ ಮಾಮ ಮತ್ತು ಮಹೇಶ್ ಬಾಬು ಇರುವ ಕಾರಣ ಈ ಫೋಟೋ ವೈರಲ್ ಆಗಿದೆ. ಜೊತೆಗೆ ಉಪಾಸನಾ, ನಮ್ರತಾ ಮತ್ತು ಪ್ರಣತಿ ಅವರ ಫೋಟೋಗಳು ಕೂಡ ವೈರಲ್ ಆಗಿವೆ. ಇದು ದೀಪಾವಳಿ ಸ್ಪೆಷಲ್ ಟ್ರೀಟ್ ಎಂದು ಟಾಲಿವುಡ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
https://www.instagram.com/p/CziPU4lPzZs/?utm_source=ig_web_copy_link