CINE NEWS | ಬಾಲಿವುಡ್ ಕಪಲ್ ಮೇಲೆ ದ್ವೇಷ ಕಾರ್ತಿರೋ ಕಂಗನಾ, ನುಗ್ಗಿ ಮನೆಗೆ ಹೊಡೀತಿನಿ ಅಂತಿದ್ದಾರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಒಂದು ವಾರದಿಂದ ಬಾಲಿವುಡ್ ನಟಿ ಕಂಗನಾ ರನೌಟ್ ಸಿಕ್ಕಾಪಟ್ಟೆ ಸಿಟ್ಟಲ್ಲಿದ್ದಾರೆ. ಬಾಲಿವುಡ್ ಜೋಡಿಯಿಂದ ನನ್ನ ವಾಟ್ಸಾಪ್ ಚಾಟ್ ಲೀಕ್ ಆಗಿದೆ ಎಂದು ದೂರಿದ ಬೆನ್ನಲ್ಲೇ ಇದೀಗ ಮತ್ತೊಂದು ಹೇಳಿಕೆ ನೀಡಿದ್ದಾರೆ.

ನಾನು ತಾಳ್ಮೆ ಕಳೆದುಕೊಂಡ್ರೆ ಏನಾದ್ರೂ ಮಾಡ್ತೀನಿ ನಾನು ಹುಚ್ಚಿ, ಏನು ಮಾಡೋದಕ್ಕೂ ಯೋಚ್ನೆ ಮಾಡೋದಿಲ್ಲ, ಬಾಲಿವುಡ್ ಕಪಲ್ ಮನೆಗೆ ನುಗ್ಗಿ ಹೊಡೆದು ಬರ‍್ತೀನಿ ಎಂದು ಕಂಗನಾ ಹೇಳಿದ್ದಾರೆ.

ಈ ಬಾಲಿವುಡ್ ಕಪಲ್ ಯಾರು ಎಂದು ಮಾತ್ರ ಕಂಗನಾ ಹೇಳುತ್ತಿಲ್ಲ, ಅವರ ಬಗ್ಗೆ ಸಿಟ್ಟಿನಲ್ಲಿ ಸಿಕ್ಕಿದ್ದೆಲ್ಲಾ ಹೇಳುತ್ತಿದ್ದಾರೆ. ಇನ್ನು ಎಮರ್ಜೆನ್ಸಿ ಸಿನಿಮಾಕ್ಕಾಗಿ ನಾನು ನನ್ನ ಆಸ್ತಿಯನ್ನೆಲ್ಲಾ ಅಡ ಇಟ್ಟಿದ್ದೇನೆ ಎಂದು ಕೂಡ ಕಂಗನಾ ದುಃಖದಲ್ಲಿ ಹೇಳಿಕೊಂಡಿದ್ದರು. ಇಷ್ಟೆಲ್ಲಾ ಆದಮೇಲೂ ಎಲ್ಲರಿಗೆ ಇರೋದು ಒಂದೇ ಪ್ರಶ್ನೆ ಈ ಬಾಲಿವುಡ್ ಕಪಲ್ ಯಾರು?

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!