ಹೊಸದಿಗಂತ ವರದಿ ಮಡಿಕೇರಿ:
ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು ಅಪಾರ ಜೀವ ಹಾನಿಯಾಗಿದೆ.
ಕೊಡಗು ಜಿಲ್ಲೆಯ ನಿವಾಸಿಗಳು ಯಾರಾದರೂ ಟರ್ಕಿ ಅಥವಾ ಸಿರಿಯಾ ದೇಶಗಳಲ್ಲಿ ವಾಸವಿದ್ದು, ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ 08272-221077, 08272-221099 ಅಥವಾ 8550001077 (ಕೇವಲ ವಾಟ್ಸ ಆಪ್ ಮಾತ್ರ)
ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.