ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕರುನಾಡ ಅಧಿಪತಿ ದಾಸ ದರ್ಶನ್ ಅವರ ಹುಟ್ಟುಹಬ್ಬ 47ನೇ ವಸಂತಕ್ಕೆ ಕಾಲಿಟ್ಟಿರುವ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ತಮ್ಮ ನೆಚ್ಚಿನ ಸೆಲೆಬ್ರಟಿಸ್ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಇಂದು ಅಭಿಮಾನಿಗಳಿಗೆ ಡಬಲ್ ಧಮಾಕ ಒಂದು ಬಾಸ್ ಬರ್ತಡೇ ಆದ್ರೆ ಮತ್ತೊಂದು ಬಾಸ್ ನಟನೆಯ ಡೆವಿಲ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ದರ್ಶನ್ ಅವರ ಹುಟ್ಟುಹಬ್ಬದಂದು, ಅನೇಕ ಅಭಿಮಾನಿಗಳು ತಮ್ಮ ದೇಹ ಮತ್ತು ಕೆನ್ನೆಯ ಮೇಲೆ ದಾಸನ ಫೋಟೋ ಹಾಕಿಸಿಕೊಂಡಿದ್ದರು. ದಾಸನ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ರಾಜ್ಯದ ಹಲವು ಭಾಗಗಳಿಂದ ಡಿ ಬಾಸ್ ನೋಡಲು ಜನಸಾಗರವೇ ಹರಿದು ಬರುತ್ತಿದೆ. ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸಿ ಅಭಿಮಾನಿಗಳು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷವೆಂದರೆ ಈ ವರ್ಷ ಅಭಿಮಾನಿಗಳು ಕೇಕ್, ಹಾರ, ತುರಾಯಿ ತರಬೇಡಿ ಎಂದು ದಚ್ಚು ಕೇಳಿಕೊಂಡಿದ್ದಾರೆ. ಬದಲಿಗೆ, ಅವರು ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಕ್ಕೆ ಸಹಾಯ ಮಾಡಲು ಅಕ್ಕಿ, ಬೇಳೆ ಮತ್ತು ಎಣ್ಣೆಯನ್ನು ತರಲು ಕೇಳಿದ್ದರು. ಅದರಂತೆ, ಅಭಿಮಾನಿಗಳು ದಾವಸ ಧಾನ್ಯಗಳನ್ನು ತಂದಿದ್ದರ.