ಭಯೋತ್ಪಾದನೆ ಬೆಂಬಲಿಗರು ಕಾಶ್ಮೀರಿ ಫೈಲ್‌ ಚಿತ್ರವನ್ನು ಟೀಕಿಸುತ್ತಿದ್ದಾರೆ; ವಿವೇಕ್‌ ಅಗ್ನಿಹೋತ್ರಿ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಟೀಕಿಸುತ್ತಿರುವ ವಿರುದ್ಧ ಕಿಡಿಕಾರಿರುವ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಭಯೋತ್ಪಾದನೆಯ ಬೆಂಬಲಿಗರು ಚಿತ್ರದ ಕುರಿತಾಗಿ ದೋಷಾರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರಿ ಫೈಲ್ಸ್‌ ಚಿತ್ರವು ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ದೇಶಾದ್ಯಂತ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಅಭಿನಯವನ್ನು ಜನರು ಮೆಚ್ಚಿದ್ದಾರೆ. ಚಿತ್ರವು ಈಗಾಗಲೇ ೨೦೦ ಕೋಟಿಗಿಂತಲೂ ಹೆಚ್ಚಿನ ಕಲೆಕ್ಷನ್‌ ಮಾಡಿ ಚಿತ್ರ ಮುನ್ನುಗ್ಗುತ್ತಿದೆ. ಈ ನಡುವೆ ಕಲವರು ಚಿತ್ರದ ಕಥಾವಸ್ತು ಕುರಿತು ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಈ ಚಿತ್ರವು ಒಂದು ವರ್ಗವನ್ನು ಕೇಂದ್ರೀಕರಿಸಿ ತಯಾರಾದ ಚಿತ್ರ, ಸಮಾಜದಲ್ಲಿ ಉದ್ವಿಗ್ನತೆ ಹರಡುತ್ತಿದೆ ಆರೋಪಿಸಿಸುತ್ತಿದ್ದಾರೆ. ಚಿತ್ರವು ಸಂಸತ್ತಿನಲ್ಲೂ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
ಚಿತ್ರವು ಕೋಮು ದ್ರುವೀಕರಣ ಮಾಡುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ಕೆಟ್ಟವರು ಮತ್ತು ಒಳ್ಳೆಯವರ ನಡುವೆ ಧ್ರುವೀಕರಣಗಳನ್ನು ಗುರುತಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಲ್ಲಿಸಬಹುದಾದ ದೊಡ್ಡ ಕೊಡುಗೆಯಾಗಿದೆ. ಆದರೆ ನಾನು ಇದಕ್ಕೆ ಧ್ರುವೀಕರಣ ಎಂಬ ಪದವನ್ನು ಬಳಸುವುದಿಲ್ಲ, ಬದಲಾಗಿ ʼವಿಭಿನ್ನತೆʼ ಎಂದು ಹೇಳುತ್ತೇನೆ. ಒಂದು ಕಡೆಗೆ ಮಾನವೀಯ ಮೌಲ್ಯಗಳು, ಮಾನವ ಹಕ್ಕುಗಳಲ್ಲಿ ನಂಬಿಕೆಯಿರುವ ಜನರಿದ್ದರೆ, ಮತ್ತೊಂಡೆಡೆ ಭಯೋತ್ಪಾದಕರಿಗೆ ಸೈದ್ಧಾಂತಿಕ, ಬೌದ್ಧಿಕ ಹಾಗೂ ಮಾಧ್ಯಮಗಳ ಮೂಲಕ ಬೆಂಬಲ ನೀಡುವ ಜನರಿದ್ದಾರೆ. ಅದೃಷ್ಟವಶಾತ್‌ ಮಾನವ ಹಕ್ಕುಗಳು, ಮಾನವೀಯ ಮೌಲ್ಯಗಳನ್ನು ಬೆಂಬಲಿಸುವ ಜನರು ದೊಡ್ಡಸಂಖ್ಯೆಯಲ್ಲಿದ್ದೇವೆ. ಭಯೋತ್ಪಾದನೆ ಬೆಂಬಲಿಸುವ ಮನಸ್ಥಿತಿಯವರು ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದಿದ್ದಾರೆ.
ಕಾಶ್ಮೀರ ಫೈಲ್ಸ್ ಕೋಮು ಧ್ರುವೀಕರಣದ ಚಿತ್ರ ಎಂದು ಹೇಳುವ ಜನರ ಬಗ್ಗೆ ಏನು ಹೇಳಿತ್ತೀರಿ ಎಂದು ಕೇಳಿಬಂದ ಪ್ರಶ್ನೆಗೆ, ಭಯೋತ್ಪಾದಕ ಮನಸ್ಥತಿಯವರಿಗೆ ನಾನು ಏನನನ್ನಾದರೂ ಏಕೆ ಹೇಳಬೇಕು?” ಅಂತಹವರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕಾಶ್ಮೀರ ಫೈಲ್‌ ಜನರನ್ನು ವಿಭಜಿಸುತ್ತಿಲ್ಲ, ಧ್ರುವೀಕರಣವನ್ನೂ ಮಾಡುತ್ತಿಲ್ಲ. ಬದಲಾಗಿ ಅದು ಸಮಾಜದಲ್ಲಿರುವ ರಾಮ ಮತ್ತು ರಾವಣರ ನಡುವಿನ ವ್ಯತ್ಯಾಸವನ್ನು ತೋರಿಸುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!