ನಟಿ ಅಮ್ರೀನ್‌ ಭಟ್‌ ಸಾವಿಗೆ ಕಾರಣವಾಗಿದ್ದ ಉಗ್ರರನ್ನು 24 ಗಂಟೆಯೊಳಗೆ ಹೊಡೆದುರುಳಿಸಿದ ಕಾಶ್ಮೀರ ಪೋಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಮ್ಮು ಕಾಶ್ಮೀರದ ಕಿರುತೆರೆ ನಟಿ ಅಮ್ರೀನ್‌ ಭಟ್‌ ಸಾವಿಗೆ ಕಾರಣವಾಗಿದ್ದ ಭಯೊತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೋಲೀಸರು ಹೇಳಿದ್ದಾರೆ.

ಬಡ್ಗಾಮ್‌ ನಲ್ಲಿರುವ ನಟಿಯ ಮನೆಯ ಮೇಲೆ ಬುಧವಾರ ರಾತ್ರಿ ಏಕಾಏಕಿ ಭಯೋತ್ಪಾದಕರು ದಾಳಿ ನಡೆಸಿ ಆಕೆಯನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ ಆಕೆಯ 10 ವರ್ಷದ ಸೋದರಳಿಯನಿಗೂ ಗುಂಡುತಗುಲಿತ್ತು. ಅವರ ಸಾವಿನ 24 ಗಂಟೆಗಳೊಳಗೆ ಆ ಉಗ್ರರನ್ನು ಗುರುತಿಸಿ ಎನ್‌ ಕೌಂಟರ್‌ ಮಾಡಲಾಗಿದೆ. 10 ವರ್ಷದ ಬಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ.

ಗುರುವಾರ ತಡರಾತ್ರಿ ಇಬ್ಬರು ಎಲ್‌ಇಟಿ ಉಗ್ರರನ್ನು ಶ್ರೀನಗರದ ಸೌರಾ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದ್ದು ಎಕೆ-47 ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರನ್ನು ಶಾಕೀರ್‌ ಅಹಮದ್‌ ವಾಜಾ, ಅಫ್ರೀನ್‌ ಅಫ್ತಾಬ್‌ ಮಲ್ಲಿಕ್‌ ಎಂದು ಗುರುತಿಸಲಾಗಿದೆ.

ಕಳೆದ 3 ದಿವಸಗಳಲ್ಲಿ 7 ಲಷ್ಕರ್‌ ಎ ತೋಯ್ಬಾ ಹಾಗೂ 3 ಜೈಶ್‌ ಎ ಮೊಹಮದ್‌ ಸೇರಿದಂತೆ 10 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರೀ ಪೊಲೀಸರು ತಿಳಿಸಿರುವ ಕುರಿತು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!