ನಿಮಗೆ ಅಮೆರಿಕ ಪ್ರೆಸಿಡೆಂಟ್‌ ಎನ್ನುವುದು ಮರೆತು ಹೋಗಿದೆಯೇ? ಜೋ ಬಿಡೆನ್ ಗೆ ಜನ ಹೀಗೆ ಕೇಳುತ್ತಿರುವುದೇಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆರಿಕಾದ ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರ ಹತ್ಯೆಯಾಗಿದ್ದ ಘೋರ ದುರಂತ ಮಂಗಳವಾರ ನಡೆದಿತ್ತು. ಈ ಕುರಿತು ತೀವ್ರ ಸಂತಾಪ ಸೂಚಿಸಿ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್‌ ಮಾಡಿದ್ದ ಟ್ವೀಟ್‌ ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಜೋ ಬಿಡೆನ್‌ ಹಂಚಿಕೊಂಡಿದ್ದ ಟ್ವಿಟ್‌ ನಲ್ಲಿ, ಮುಗ್ಧ ಮಕ್ಕಳ ಹತ್ಯೆ ತೀವ್ರ ಆಘಾತ ತಂದಿದೆ. ನಾವು ದೇಶದಲ್ಲಿ ಗನ್‌ ಲಾಬಿಯನ್ನು ತಡೆಗಟ್ಟಬೇಕಿದೆ. ದೇಶದಲ್ಲಿ ಕಠಿಣ ಶಸ್ತ್ರಸ್ತ್ರ ಕಾಯಿದೆಯನ್ನು ಜಾರಿಗೆ ತರಲು ಅಮೆರಿಕನ್ನರು ಸಂಸತ್ತಿಗೆ ಒತ್ತಡ ಹೇರಬೇಕು ಎಂಬರ್ಥದಲ್ಲಿ ಟ್ವಿಟ್‌ ಮಾಡಿದ್ದರು. ಈ ಟ್ವಿಟ್‌ ಈಗ ಆಕ್ರೋಶಕ್ಕೆ ತುತ್ತಾಗಿದೆ. ಅಮೆರಿಕಾದಲ್ಲಿ ಕಠಿಣ ಶಸ್ತ್ರಸ್ತ್ರ ನೀತಿಯನ್ನು ಜಾರಿಗೊಳಿಸಲು ಸಾಧ್ಯವಾಗದ ಅಧ್ಯಕ್ಷ ನೆಪಗಳನ್ನು ಹೇಳುತ್ತಿದ್ದಾರೆ. ಬಿಡೆನ್‌ ತಾವು ಅಧ್ಯಕ್ಷ ಎಂಬುದನ್ನೇ ಮರೆತು ಸಂಸತ್ತಿಗೆ ಒತ್ತಾಯಿಸುವಂತೆ ಕರೆ ನೀಡುತ್ತಿದ್ದಾರೆ. ಇಂತಹದ್ದೊಂದು ಭೀಕರ ಹತ್ಯಾಕಾಂಡ ನಡೆದ ನಂತರವೂ ತಾವು ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡದೆ ಪರೋಕ್ಷವಾಗಿ ಗನ್‌ ಲಾಬಿಗೆ ಬೆಂಬಲ ನೀಡುತ್ತಿದ್ದಾರೆ.
ಅಮೆರಿಕಾ ಅಧ್ಯಕ್ಷರು ಈಗಲೂ ಬಂದೂಕು ಕಾನೂನುಗಳಿಗೆ ಬದಲಾವಣೆ ತರಲು ಮುಂದಾಗುವುದಿಲ್ಲವೇ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನೀವು ಅಧ್ಯಕ್ಷರು, ನೀವು ಏನನ್ನಾದರೂ ಮಾಡಿ, ಆದರೆ ದೇಶದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿರುವ ಕಾಯ್ದೆ ಜಾರಿಗೊಳಿಸಲು ವಿರೋಧ ಪಕ್ಷಕ್ಕೆ ಭಯಪಡುವುದನ್ನು ಮಾತ್ರ ನಿಲ್ಲಿಸಿ ಎಂದು ಮತ್ತೆ ಕೆಲವರು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!