ಕಥಕ್ ನೃತ್ಯಪಟು, ಪದ್ಮವಿಭೂಷಣ ಪುರಸ್ಕೃತ ಬಿರ್ಜೂ ಮಹರಾಜ್ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಕಥಕ್ ನೃತ್ಯಪಟು, ಪದ್ಮವಿಭೂಷಣ ಬಿರ್ಜೂ ಮಹರಾಜ್ ವಿಧಿವಶರಾಗಿದ್ದಾರೆ.
ನಿನ್ನೆ ತಡರಾತ್ರಿ ಹೃದಯಾಘಾತದಿಂದ ಬಿರ್ಜೂ ಮಹರಾಜ್(83) ನಿಧನರಾಗಿದ್ದು, ನೃತ್ಯ ಕ್ಷೇತ್ರದ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕಲಾಸೇವೆಯನ್ನೇ ಬದುಕಾಗಿಸಿಕೊಂಡಿದ್ದ ಮಹರಾಜ್ ಅವರ ನಿಧನಕ್ಕೆ ದೇಶವೇ ಮರುಗಿದೆ. ಬಿರ್ಜೂ ಮಹರಾಜ್ ಅವರಿಗೆ ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿತ್ತು. ಡಯಾಲಿಸಿಸ್ ಕೂಡ ಮಾಡಲಾಗಿತ್ತು. ನಿನ್ನೆ ತಡರಾತ್ರಿ ಮೊಮ್ಮಕ್ಕಳೊಂದಿಗೆ ಆಟವಾಡುವಾಗ ಅವರ ಆರೋಗ್ಯ ಹದಗೆಟ್ಟಿದೆ. ಮನೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅವರನ್ನು ಉಳಿಸಲು ಆಗಿಲ್ಲ.

ಬಿರ್ಜೂ ಮಹರಾಜ್ ಅವರ ತಂದೆ ಅರ್ಚನ್ ಮಹಾರಾಜ್, ಚಿಕ್ಕಂಪಂದಿರಾದ ಶಂಭು ಮತ್ತು ಲಚ್ಚು ಮಹರಾಜ್ ಕೂಡ ಕಥಕ್ ನೃತ್ಯಪಟುಗಳಾಗಿದ್ದರು. ಬಾಲ್ಯದಿಂದಲೇ ಕಥಕ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಬಿರ್ಚೂ ಅವರು ಸಣ್ಣ ವಯಸ್ಸಿನಿಂದಲೇ ತಂದೆ ಜತೆ ಸೇರಿ ಪ್ರದರ್ಶನ ನೀಡುತ್ತಿದ್ದರು.
ಬಿರ್ಜೂ ಮಹರಾಜ್ ನೃತ್ಯಪಟುವಷ್ಟೇ ಅಲ್ಲದೆ, ಗಾಯಕರೂ ಹೌದು. ಡ್ರಮ್ ಹಾಗೂ ತಬಲವಾದನವೂ ಅವರಿಗೆ ಕರಗತವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!