ದಿನಭವಿಷ್ಯ: ಯಾರ ಮೇಲೂ ಅತಿಯಾದ ವಿಶ್ವಾಸ ಒಳ್ಳೆಯದಲ್ಲ, ಅವರಿಂದಲೇ ನಿಮಗೆ ಹಾನಿಯಾದೀತು!

ಸೋಮವಾರ, 17 ಜನವರಿ  2022

ಮೇಷ
ಕೌಟುಂಬಿಕ ಕರ್ತವ್ಯ ಮೊದಲು ನೆರವೇರಿಸಬೇಕು. ಬಳಿಕ ಇನ್ನಿತರ ಹೊಣೆಗೆ ಗಮನ ಹರಿಸಿ. ಮಾತಿನ ಮೇಲೆ ಹಿಡಿತವಿಡಿ, ಜಗಳವನ್ನು ತಪ್ಪಿಸಿ.

ವೃಷಭ
ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಇಂದು ಜನಮನ್ನಣೆ ದೊರಕುವುದು. ಸಾಮಾಜಿಕ ಕಾರ್ಯಗಳಲ್ಲಿ ಸಂತೋಷ ಪಡುವಿರಿ.

ಮಿಥುನ
ಯಾರ ಮೇಲೂ ಅತಿಯಾದ ವಿಶ್ವಾಸ ಇರಿಸುವುದು ಸೂಕ್ತವಲ್ಲ. ಅವರಿಂದಲೇ ನಿಮಗೆ ಹಾನಿಯಾದೀತು. ಕೌಟುಂಬಿಕ ಒತ್ತಡ.

ಕಟಕ
ಯಶಸ್ಸು ಮತ್ತು ಅದೃಷ್ಟ ಇಂದು ನಿಮ್ಮ ಜತೆಗಿರುವುದು. ಭವಿಷ್ಯದ ಬಗ್ಗೆ ಆತಂಕ ಬೇಡ. ಎಲ್ಲವೂ ನಿಮ್ಮ ಪರವಾಗಿ ಸಾಗುವುದು. ಕೌಟುಂಬಿಕ ನೆಮ್ಮದಿ.

ಸಿಂಹ
ಹಣ ಗಳಿಕೆಗೆ ಸುಲಭ ದಾರಿ ಹಿಡಿಯಬೇಡಿ. ಅದು ಹಾನಿಯನ್ನೂ ತರಬಹುದು. ಬಂಧುತ್ವ ಬೆಳೆಸುವ ಕಾರ್ಯಕ್ಕೆ ಕೌಟುಂಬಿಕ ಸಹಕಾರ. ಆರ್ಥಿಕ ಚೇತರಿಕೆ.

ಕನ್ಯಾ
ನಿಮ್ಮ ಅಭಿರುಚಿಗೆ ಸ್ಪಂದಿಸುವ ವ್ಯಕ್ತಿಯ ಭೇಟಿ ಸಂಭವ. ಅವರೊಂದಿಗೆ ಒಡನಾಟ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ.

ತುಲಾ
ದಿನವಿಡೀ ಉತ್ಸಾಹ. ಹಳೆಯ ಸ್ನೇಹಿತರು ಭೇಟಿಯಾಗಬಹುದು. ಕೌಟುಂಬಿಕ ಕಾರ್ಯವೊಂದು ಸಫಲವಾಗಿ ಮುಗಿಯಲಿದೆ.

ವೃಶ್ಚಿಕ
ಹಣದ ವಿಷಯದಲ್ಲಿ ಹೆಚ್ಚು ಚಿಂತೆ ಮಾಡುತ್ತೀರಿ. ಆದರೆ ವಾಸ್ತವದಲ್ಲಿ ನೀವು ಕಳವಳ ಪಡುವ ಅಗತ್ಯವಿಲ್ಲ. ಕಾರ್ಯಗಳೆಲ್ಲ ಸುಗಮ.

ಧನು
ನೀವು ಈಗ ಕೈಗೆತ್ತಿಕೊಂಡಿರುವ ಕಾರ್ಯವು ನಿಮಗೆ ಅತಿ ಮುಖ್ಯವಾದುದು. ಆರಂಭಿಕ ಸಮಸ್ಯೆ ಮೂಡಿದರೂ ಬಳಿಕ ಒಳ್ಳೆಯದಾಗಲಿದೆ.

ಮಕರ
ನಿಮ್ಮ ಬದುಕಿನಲ್ಲಿ ಇಂದು ಬದಲಾವಣೆ ತೋರಬಹುದು. ಆದರೆ ಅದು ನಿಮಗೆ ಹೆಚ್ಚು ಒಳಿತನ್ನು ತಾರದು. ಪ್ರೀತಿಯಲ್ಲಿ ಪ್ರತಿಕೂಲ ಬೆಳವಣಿಗೆ.

ಕುಂಭ
ಕೆಲಸದಲ್ಲಿ ಯಶಸ್ಸು. ಸಂಗಾತಿಯಲ್ಲಿ ನಿಮ್ಮ ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸಿ. ಕೌಟುಂಬಿಕವಾಗಿ ಹೊಸ ವಿಷಯಗಳು ನಿಮಗೆ ತಿಳಿದುಬರಬಹುದು.

ಮೀನ
ನಿಮ್ಮ ಗುರಿ ಇಂದು ಈಡೇರಲಿದೆ. ಇತರರು ನಿಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸುವಿರಿ. ಆಪ್ತರ ಸಂಗ -ಖುಷಿ. ಆರ್ಥಿಕವಾಗಿ ಸುಧಾರಣೆ ಕಂಡೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!