ಹೊಸ ಚಿತ್ರಕ್ಕಾಗಿ ವಿಭಿನ್ನ ಅವತಾರದಲ್ಲಿ ಎಂಟ್ರಿ ಕೊಟ್ಟ ಕತ್ರಿನಾ ಕೈಫ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ ವರ್ಷ ವಿಕ್ಕಿ ಕೌಶಲ್ ಅವರೊಂದಿಗೆ ಮದುವೆಯಾದ ಬಳಿಕ ಚಿತ್ರರಂಗದಿಂದ ಕೊಂಚ ಕಾಲ ವಿರಾಮ ಪಡೆದಿದ್ದ ಕತ್ರಿನಾ ಕೈಫ್‌ ಈಗ ತನ್ನ ಮುಂಬರುವ ಚಿತ್ರ ‘ಫೋನ್ ಭೂತ್’ದ ಪ್ರಚಾರದಲ್ಲಿ ನಿರತರಾಗಿದ್ದಾರೆ.  ಸಾಮಾಜಿಕ ತಾಣಗಳಲ್ಲಿ ಕತ್ರಿನಾ ಹೊಸ ಲುಕ್‌ ನೋಡಿದವರು ಅಚ್ಚರಿಕೊಂಡಿದ್ದಾರೆ.
ಗುಲಾಬಿ ಬಣ್ಣದ ಸೀರೆ ಯಲ್ಲಿ ಮಾಡ್ರನ್‌ ಹಾಗೂ ಟ್ರೆಡಿಷನ್‌ ಸಮ್ಮಿಶ್ರಣವಿರುವ ವಿಭಿನ್ನ ಲುಕ್‌ ನಲ್ಲಿ ಕತ್ರಿನಾ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
ಅವರ ಹೊಸ ಲುಕ್‌ ಅಭಿಮಾನಿಗಳಿಗೆ ಇಷ್ಟವಾಗಿದೆ.  ‘ಫೋನ್ ಭೂತ್’ ಚಿತ್ರದ ಸಹನಟ ಇಶಾನ್ ಖಟ್ಟರ್ ಸಹ ಕತ್ರಿನಾ ಹೊಸ ಲುಕ್‌ ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂದೇಶ ಹಂಚಿಕೊಂಡಿದ್ದಾರೆ. ‘ಫೋನ್ ಭೂತ’ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ಜಾಕಿ ಶ್ರಾಫ್ ರಂತಹ ಖ್ಯಾತ ನಟರು ನಟಿಸಿದ್ದಾರೆ. ಚಿತ್ರವು ನವೆಂಬರ್ 4 ರಂದು ಚಿತ್ರಮಂದಿರಗಳಿಗೆ ಬರಲಿದೆ.
ಕತ್ರಿನಾ ಮುಂದಿನ ಚಿತ್ರ ‘ಟೈಗರ್ 3’ ನಲ್ಲಿ ಸಲ್ಮಾನ್ ಖಾನ್ ಮತ್ತು ಇಮ್ರಾನ್ ಹಶ್ಮಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅದರೊಂದಿಗೆ ಫರ್ಹಾನ್ ಅಖ್ತರ್ ಅವರ ‘ಜೀ ಲೇ ಜರಾ’ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಜೊತೆಗೆ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!