ಭೂತಕೋಲ ಶೂಟಿಂಗ್‌ ಗೆಂದೇ ತಿಂಗಳ ಕಾಲ ನಾನ್‌ ವೆಜ್ ಬಿಟ್ಟಿದ್ದರಂತೆ ರಿಷಬ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಕಾಂತಾರ ಚಿತ್ರ ಬಾಕ್ಸಾಫಿಸನ್ನು ಕೊಳ್ಳೆ ಹೊಡೆದಿರುವುದು ಎಲ್ಲರಿಗೂ ಗೊತ್ತಿದೆ. ಕಾಡಿನ ಸುತ್ತ ಹೆಣೆದ ಕಥಯೊಂದು ದೈವ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ಕಟ್ಟಿಕೊಡುವ ಸರಳ ಎಳೆಯ ಕಥಾಹಂದರ ಹೊಂದಿರುವ ಕಾಂತಾರ ಚಿತ್ರವು ಗ್ರಾಮೀಣ ಬದುಕನ್ನೂ ಹಾಗೂ ವಿಶೇಷವಾಗಿ ಕರಾವಳಿ ಭಾಗದಲ್ಲಿ ಆಚರಣೆಯಲ್ಲಿರುವ ಭೂತಕೋಲ ಎಂಬ ವಿಶಿಷ್ಟವಾದ ಪರಂಪರೆಯನ್ನು ಪ್ರೇಕ್ಷಕರೆದುರು ಮನಮುಟ್ಟುವಂತೆ ಬಿಚ್ಚಿಟ್ಟಿದೆ. ಆದರೆ ಈ ಚಿತ್ರಕ್ಕೆ ರಿಷಬ್‌ ಶೆಟ್ಟಿ ಎಷ್ಟೆಲ್ಲ ಕಷ್ಟಪಟ್ಟಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.

ಇತ್ತೀಚೆಗೆ ಟೈಮ್ಸ್‌ ನೌ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ರಿಷಬ್‌ ʼನಟನೆಯ ಭಾಗ ಖಂಡಿತವಾಗಿ ತುಂಬಾ ಕಠಿಣವಾಗಿತ್ತು. ಅದರಲ್ಲೂ ಭೂತಕೋಲವನ್ನು ಅಭಿನಯಿಸುವುದು ತುಂಬಾ ಕಷ್ಟವಾಗಿತ್ತು. ದೈವ ಕೋಲ ಸೀಕ್ವೆನ್ಸ್‌ ಗೆಂದೇ ಚಿತ್ರೀಕರಣಕ್ಕೂ 20-30 ದಿನ ಮುಂಚಿನಿಂದ ನಾನ್‌ ವೆಜ್‌ ತಿನ್ನುವುದನ್ನು ತ್ಯಜಿಸಿದ್ದೆʼ ಎಂದಿದ್ದಾರೆ.

“ಇದರಲ್ಲಿರುವ ಆಕ್ಷನ್ ಸೀಕ್ವೆನ್ಸ್‌ಗಳಿಂದ ಈ ನಟನೆ ಬಲು ಕಠಿಣ ವಾಗಿತ್ತು. ವಿಶೇಷವಾಗಿ ದೈವ್ ಕೋಲಾ ಸೀಕ್ವೆನ್ಸ್‌ನಲ್ಲಿ ನಾನು 50-60 ಕೆಜಿ ತೂಕವನ್ನು ಗಳಿಸಬೇಕಿತ್ತು. ನಾನು ಚಿತ್ರೀಕರಣಕ್ಕೆ 20-30 ದಿನಗಳ ಮೊದಲು ನಾನ್ ವೆಜ್ ತಿನ್ನುವುದನ್ನು ಬಿಟ್ಟಿದ್ದೆ. ಒಮ್ಮೆ ದೈವ್ ಕೋಲಾ ಅಲಂಕಾರವನ್ನು ಹಾಕಿದ ನಂತರ, ನಾನು ಎಳನೀರನ್ನು ಹೊರತುಪಡಿಸಿ ಏನನ್ನೂ ಸೇವಿಸುತ್ತಿರಲಿಲ್ಲ. ಅವರು ಆ ನೃತ್ಯ ಮಾಡುವ ಮೊದಲು ಮತ್ತು ನಂತರ ನನಗೆ ಪ್ರಸಾದವನ್ನು ನೀಡುತ್ತಿದ್ದರು.” ಎಂದಿದ್ದಾರೆ.

ಅಲ್ಲದೇ ಬೆಂಕಿ ಕೊಳ್ಳಿಯ ಫೈಟಿಂಗ್‌ ಅನ್ನು ನೆನಪಿಸಿಕೊಂಡ ಅವರು ಇದು ನನ್ನ ಜೀವನದಲ್ಲಿ ನೆನಪಿನಲ್ಲುಳಿಯುವ ಅನುಭವ. ಚಿತ್ರೀಕರಣದವೇಳೆ ಕೊಳ್ಳಿಯಿಂದ ಏಟು ತಿನ್ನುವ ಸಂದರ್ಭದಲ್ಲಿ ನಿಜವಾಗಿಯೂ ನನ್ನ ಬೆನ್ನು ಸುಟ್ಟು ಹೋಗಿತ್ತು ಎಂದಿದ್ದಾರೆ.

ಭೂತಕೋಲವೆಂಬುದು ಸಾಮಾನ್ಯ ಆಚರಣೆಯಲ್ಲ ಅದರಲ್ಲಿರುವ ದೈವಕ್ಕೆ ವಿಶೇಷ ಶಕ್ತಿಗಳಿರುವುದನ್ನು ಜನ ನಂಬಿದ್ದಾರೆ. ಹಾಗಾಗಿಯೇ ಭೂತಕೋಲವೆಂಬುದನ್ನು ನಟಿಸುವುದು ಸುಲಭದ ಮಾತಲ್ಲ. ಅದರಲ್ಲೂ ಪರಂಪರಾಗತವಾಗಿ ರೂಢಿಯಲ್ಲಿರುವ ಆಚರಣೆಗೆ ಧಕ್ಕೆಯಾಗದಂತೆ, ಆಚರಣೆಗಳಿಗೆ ಅಪದ್ಧವಾಗದಂತೆ ನೋಡಿಕೊಳ್ಳಬೇಕು. ಸಿನೀಮೀಯ ಶೈಲಿಯಲ್ಲಿಯೂ ಪ್ರೇಕ್ಷಕರಿಗೆ ಇಷ್ಟವಾಗುವಂತೆ ನಟಿಸುವುದಿದೆಯಲ್ಲ ಅದು ಅಗಾಧ ಪರಿಶ್ರಮ ಹಾಗೂ ಶಿಸ್ತು ಮತ್ತು ಶ್ರದ್ಧೆಯನ್ನು ಬೇಡುತ್ತದೆ.

ಹೀಗೆ ನಾನ್‌ ವೆಜ್‌ ತ್ಯಜಿಸಿ, ಪ್ರಸಾದ ಸ್ವೀಕರಿಸಿ, ಎಳನೀರಿನಲ್ಲಿಯೇ ಹೊತ್ತು ಮುಗಿಸಿ ಶ್ರದ್ಧೆಯಿಂದ ನೇಮ ನಿಷ್ಠೆಗಳನ್ನು ಪಾಲಿಸಿದ್ದರಿಂದಲೇ ಭೂತಕೋಲದ ದೃಶ್ಯವು ಅಷ್ಟೊಂದು ಅಚ್ಚುಕಟ್ಟಾಗಿ ಪ್ರೇಕ್ಷಕನ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು ಎಂದರೆ ತಪ್ಪಾಲಾಗರದೇನೋ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!