ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್ ಪತಿಯ 16ನೇ ಸರಣಿ ಆಗಸ್ಟ್ 12 ರಂದು ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆಯೊಂದಿಗೆ ಪ್ರಾರಂಭವಾಗಿದೆ.
ಬೆಂಗಳೂರು ಮೂಲದ ಉತ್ಕರ್ಷ್ ಬಕ್ಸಿ ಅವರು ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಮೊದಲ ಸ್ಪರ್ಧೆಯಲ್ಲಿ ಎಂಜಿನಿಯರ್ ಉತ್ಕರ್ಷ್ ಬಕ್ಸಿ ಅವರು ಪ್ರಾರಂಭದ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಆದರೆ 25 ಲಕ್ಷ ರೂ. ಮೌಲ್ಯದ ಮಹಾಭಾರತದ ಪ್ರಶ್ನೆಗೆ ಉತ್ತರ ನೀಡುವಲ್ಲಿ ವಿಫಲರಾದರು.
ಅಮಿತಾಭ್ ಬಚ್ಚನ್ ಅವರು ಉತ್ಕರ್ಷ್ ಬಕ್ಸಿ ಅವರ ಬಳಿ 12.50 ಲಕ್ಷ ರೂ. ಗೆದ್ದ ಅನಂತರ ಮಹಾಭಾರತ ಕುರಿತಾದ 25 ಲಕ್ಷ ರೂ. ಪ್ರಶ್ನೆಯನ್ನು ಕೇಳಿದರು.
ಈ ಪ್ರಶ್ನೆ ಹೀಗಿತ್ತು: ಮಹಾಭಾರತದ ಪ್ರಕಾರ ಅಂಬಾಗೆ ಮಾಲೆಯನ್ನು ಉಡುಗೊರೆಯಾಗಿ ನೀಡಿದ ಮತ್ತು ಅದನ್ನು ಧರಿಸಿದವರು ಭೀಷ್ಮನನ್ನು ಕೊಲ್ಲುತ್ತಾರೆ ಎಂದು ಹೇಳಿದ ದೇವರು ಯಾರು?
ಇದರ ಆಯ್ಕೆಗಳೆಂದರೆ ಎ) ಭಗವಾನ್ ಶಿವ ಬಿ) ಭಗವಾನ್ ಕಾರ್ತಿಕೇಯ ಸಿ) ಭಗವಾನ್ ಇಂದ್ರ ಮತ್ತು ಡಿ) ಭಗವಾನ್ ವಾಯು
ಪ್ರಶ್ನೆಯನ್ನು ಕೇಳಿದ ಅನಂತರ ಉತ್ಕರ್ಷ್ ತಮ್ಮ ವೀಡಿಯೋ ಕಾಲ್ ಎ ಫ್ರೆಂಡ್ ಲೈಫ್‌ಲೈನ್ ಅನ್ನು ಬಳಸಲು ನಿರ್ಧರಿಸಿದರು. ಇದರಲ್ಲಿ ಅವರು ತಮ್ಮ ಸ್ನೇಹಿತನನ್ನು ಕರೆದು ಅವರು ನೀಡಿದ ಉತ್ತರವಾದ A ಆಯ್ಕೆಯನ್ನು ನೀಡಿದರು. ಉತ್ಕರ್ಷ್ ಅದರ ಬಗ್ಗೆ ಸಾಕಷ್ಟು ಖಚಿತವಾಗಿರಲಿಲ್ಲ. ಹೀಗಾಗಿ ಅವರು ತಮ್ಮ ಅಂತಿಮ ಜೀವಸೆಲೆಯಾದ ಡಬಲ್ ಡಿಪ್ ಅನ್ನು ತೆಗೆದುಕೊಂಡರು. ಬಳಿಕ ಅವರು ಆರಂಭದಲ್ಲಿ ಆಯ್ಕೆ ಮಾಡಿದ್ದ ಎ ಆಯ್ಕೆಯನ್ನು ಬಿಟ್ಟು D ಅನ್ನು ಆಯ್ದುಕೊಂಡರು. ಆದರೆ ಈ ಎರಡೂ ಉತ್ತರವೂ ತಪ್ಪಾಗಿತ್ತು.
ಅತಿಯಾದ ಆತ್ಮವಿಶ್ವಾಸದಿಂದ ಉತ್ಕರ್ಷ್ ಬಕ್ಸಿ 25 ಲಕ್ಷ ರೂಪಾಯಿ ಕಳೆದುಕೊಂಡು 3.20 ಲಕ್ಷ ರೂ. ಅನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ಪ್ರಶ್ನೆಯ ಸರಿಯಾದ ಉತ್ತರ ಬಿ- ಭಗವಾನ್ ಕಾರ್ತಿಕೇಯ.
ಈ ಎಪಿಸೋಡ್‌ನ ಕ್ಲಿಪ್ ಅನ್ನು ಸೋನಿ ಟಿವಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ಅಂದಹಾಗೆ, ಕೌನ್ ಬನೇಗಾ ಕರೋರ್ಪತಿ 16ರಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಮಾಡಲಾಗಿದೆ. ‘ಸೂಪರ್ ಸವಾಲ್’ ಮತ್ತು ‘ದುಗ್ನಾಸ್ತ್ರ’ ಎಂಬುದನ್ನು ಪರಿಚಯಿಸಲಾಗಿದೆ. ಸ್ಪರ್ಧಿಯು ಸೂಪರ್ ಸವಾಲ್ ಉತ್ತರಿಸಲು ಪ್ರಯತ್ನಿಸುವ ಮೂಲಕ ಮೊತ್ತವನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯಬಹುದಾಗಿದೆ.