ಧೋನಿಯಂತೆ ಕೌರ್‌ ರನೌಟ್‌: ಭಗ್ನಗೊಂಡಿತು ಟೀಮ್‌ ಇಂಡಿಯಾದ ವಿಶ್ವಕಪ್‌ ಫೈನಲ್ ಕನಸು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ICC Women’s T20 World Cup ನ ಸೆಮಿಫೈನಲ್‌ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದ್ದ ಟೀಮ್‌ ಇಂಡಿಯಾ ಉತ್ತಮವಾಗಿ ಆಡುತ್ತಿದ್ದ ನಾಯಕಿ ಹರ್ಮಾನ್‌ಪ್ರೀತ್‌ ಕೌರ್‌ ರನ್ಔಟ್‌ನೊಂದಿಗೆ ಆಸ್ಟ್ರೇಲಿಯಾ ವಿರುದ್ಧ 5 ರನ್‌ಗಳ ಸೋಲು ಕಂಡಿದೆ. ಅದರೊಂದಿಗೆ 2ನೇ ಬಾರಿಗೆ ಫೈನಲ್‌ಗೇರುವ ಆಸೆ ಭಗ್ನಗೊಂಡಿದೆ.

ಗೆಲುವಿಗೆ ಆಸೀಸ್‌ ನೀಡಿದ್ದ 173 ರನ್‌ಗಳ ಗುರಿಯನ್ನು ಉತ್ತಮವಾಗಿಯೇ ಬೆನ್ನಟ್ಟಿದ ಟೀಮ್‌ ಇಂಡಿಯಾ, ಪ್ರಮುಖ ಹಂತದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ 8 ವಿಕೆಟ್‌ಗೆ 167 ರನ್‌ ಬಾರಿಸಿ ಸೋಲು ಕಂಡಿತು.

ಗೆಲುವಿಗೆ 33 ಎಸೆತಗಳಲ್ಲಿ 40 ರನ್‌ ಬೇಕಿದ್ದಾಗ ಅರ್ಧಶತಕ ಬಾರಿಸಿ ಉತ್ತಮ ಆಡುತ್ತಿದ್ದ ಹರ್ಮಾನ್‌ಪ್ರೀತ್‌ ಕೌರ್‌ ಔಟಾಗಿದ್ದು ಕ್ರಿಕೆಟ್‌ ಅಭಿಮಾನಿಗಳಿಗೆ 2019ರ ಧೋನಿಯ ಸೆಮಿಫೈನಲ್‌ ರನೌಟ್‌ ನೆನಪಿಸಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!