ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾವೇರಿ ನೀರು ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಗಡಿ ನಾಡು ಚಾಮರಾಜನಗರದಲ್ಲಿ ರೈತರು ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಭುವನೇಶ್ವರ ಸರ್ಕಲ್ ಬಳಿ ರಸ್ತೆ ತಡೆ ನಡೆಸಿ ರೈತರು ಪ್ರತಿಭಟಿಸುತ್ತಿದ್ದು, ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪ್ರತಿ ಹರಿದು ಪ್ರತಿಭಟನೆ ಮಾಡಲಾಗುತ್ತಿದೆ. ನಮ್ಮ ಬೆಳೆಗೆ, ನಮಗೆ ಕುಡಿಯಲು ನೀರು ಇಲ್ಲ, ಅದು ಹೇಗೆ ಬೇರೆ ರಾಜ್ಯಕ್ಕೆ ನೀರು ಬಿಡ್ತಿದ್ದಾರೆ? ಆತುರದಲ್ಲಿ ನೀರು ಬಿಡ್ತಿದ್ದಾರೆ ಇದು ತಪ್ಪು. ನಮ್ಮ ಒಂದು ಬೆಳೆ ಕೂಡ ಕೈಗೆ ಬಂದಿಲ್ಲ. ತಮಿಳುನಾಡಿನವರು ಮೂರನೇ ಬೆಳೆಗೆ ನೀರು ಕೇಳ್ತಿದ್ದಾರೆ ಇದು ಸರಿಯಲ್ಲ ಎಂದಿದ್ದಾರೆ.