ಇಂದು ʻವಿಶ್ವ ಸಂಸ್ಕೃತ ದಿನʼ: ಇದರ ಇತಿಹಾಸ, ಮಹತ್ವ ತಿಳಿಯೋಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ʻವಿಶ್ವ ಸಂಸ್ಕೃತ ದಿನʼ, ಸಂಸ್ಕೃತವನ್ನು ವಿಶ್ವದ ಅತ್ಯಂತ ಹಳೆಯ ಭಾಷೆ ಮತ್ತು ದೇವರ ಭಾಷೆ ಎಂತಲೂ ಕರೆಯುತ್ತಾರೆ. ಹಿಂದು ಕ್ಯಾಲೆಂಡರ್ ಪ್ರಕಾರ, ಶ್ರಾವಣ ಮಾಸದ ಹುಣ್ಣಿಮೆಯ ದಿನವನ್ನು ಪ್ರತಿ ವರ್ಷ ‘ವಿಶ್ವ ಸಂಸ್ಕೃತ ದಿನ’ ಎಂದು ಆಚರಿಸಲಾಗುತ್ತದೆ. ಇದನ್ನು ‘ಸಂಸ್ಕೃತ ದಿವಸ್’ ಎಂದೂ ಕರೆಯುತ್ತಾರೆ. ಈ ವರ್ಷ ಆಗಸ್ಟ್ 31 ರಂದು ಸಂಸ್ಕೃತ ದಿನವನ್ನು ಆಚರಿಸುತ್ತಿದ್ದೇವೆ.

ಕಣ್ಮರೆಯಾಗುತ್ತಿರುವ ಸಂಸ್ಕೃತ ಭಾಷೆಯ ಮಹತ್ವ, ಹಿರಿಮೆ, ಅರಿವು ಮತ್ತು ಪ್ರಚಾರದ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ ದೇವನಾಗರಿ ಲಿಪಿಯನ್ನು ಹೊಂದಿರುವ ಈ ಭಾಷೆ ಸಂಸ್ಕೃತವನ್ನು ದೇವರ ಭಾಷೆ ಎಂದು ಪರಿಗಣಿಸಲಾಗುತ್ತದೆ. ಹಿಂದು ವೇದಿಕಾ ಕಾಲದಲ್ಲಿ ಈ ಭಾಷೆಗೆ ಬಹಳ ಮಹತ್ವವಿತ್ತು. ಹಿಂದೂ ಧರ್ಮದ ಪ್ರಸಿದ್ಧ ಗ್ರಂಥಗಳಾದ ವೇದಗಳು, ಉಪನಿಷತ್ತುಗಳು ಮತ್ತು ಭಗವದ್ಗೀತೆಗಳನ್ನು ಬರೆಯಲು ಸಂಸ್ಕೃತ ಭಾಷೆಯನ್ನು ಬಳಸಲಾಯಿತು. ಸಂಸ್ಕೃತವನ್ನು ಬ್ರಹ್ಮ ದೇವರು ಸೃಷ್ಟಿಸಿ ಋಷಿಗಳಿಗೆ ನೀಡಲಾಯಿತು ಎಂಬ ಹಲವು ನಂಬಿಕೆಗಳೂ ಇವೆ.

ಇತಿಹಾಸ:

ಸಂಸ್ಕೃತ ದಿನಾಚರಣೆಯನ್ನು ಭಾರತ ಸರ್ಕಾರವು 1969 ರಲ್ಲಿ ಘೋಷಿಸಿತು. ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾದ ಪಾಣಿನಿ ಸಂಸ್ಕೃತ ಭಾಷೆಗೆ ನೀಡಿದ ಕೊಡುಗೆಗಾಗಿ ಅವರ ಪರಂಪರೆಯ ಗೌರವಾರ್ಥವಾಗಿ ಈ ದಿನವನ್ನು ಸಂಸ್ಕೃತ ದಿನವೆಂದು ಆಚರಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಪಾಣಿನಿಯ ಜನ್ಮದಿನದಂದು ಆಚರಿಸಲಾಗುತ್ತದೆ.

ಮಹತ್ವ:

ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾಗಿ ಹಿಂದು ಧರ್ಮದಲ್ಲಿ ಸಂಸ್ಕೃತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೇವನಾಗರಿ ಲಿಪಿಯಲ್ಲಿರುವ ಈ ಭಾಷೆಯಲ್ಲಿ ನಮ್ಮ ಪೂರ್ವಜರು ಅನೇಕ ಪ್ರಸಿದ್ಧ ಗ್ರಂಥಗಳನ್ನು ಬರೆದಿದ್ದಾರೆ. ಧಾರ್ಮಿಕ ಗ್ರಂಥಗಳಲ್ಲದೆ ಅನೇಕ ವೈಜ್ಞಾನಿಕ, ವೈದ್ಯಕೀಯ ಮತ್ತು ಆಯುರ್ವೇದ ಗ್ರಂಥಗಳೂ ಈ ಭಾಷೆಯಲ್ಲಿವೆ.

ಅದರಲ್ಲೂ ಪಾಣಿನಿ ಪಂಡಿತರು ‘ಅಷ್ಟಾಧ್ಯಾಯಿ’ ಎಂಬ ಗ್ರಂಥವನ್ನು ಬರೆದರು. ಇದು ಸಂಸ್ಕೃತ ಭಾಷೆಗೆ ಸಂಬಂಧಿಸಿದ ವ್ಯಾಕರಣ ಗ್ರಂಥ. ಇದು ವಿಶ್ವದ ವಿಶಿಷ್ಟ ವ್ಯಾಕರಣ ಪುಸ್ತಕ ಎಂದು ಕರೆಯಲ್ಪಡುತ್ತದೆ. ಅಷ್ಟಾಧ್ಯಾಯ ಎಂಟು ಅಧ್ಯಾಯಗಳನ್ನು ಒಳಗೊಂಡಿದೆ ಮತ್ತು 4000 ಸಾವಿರ ವ್ಯಾಕರಣ ಸೂತ್ರಗಳನ್ನು ಒಳಗೊಂಡಿದೆ. ಸಂಸ್ಕೃತವು ಕ್ರಿಸ್ತಪೂರ್ವ 3000ರ ಹಿಂದಿನ ಪ್ರಾಚೀನ ಭಾಷೆ ಎಂಬ ಖ್ಯಾತಿ ಪಡೆದಿದೆ.

ಇಂಗ್ಲಿಷ್, ಗ್ರೀಕ್ ಮತ್ತು ಲ್ಯಾಟಿನ್ ಸೇರಿದಂತೆ ವಿಶ್ವದ ಅನೇಕ ಭಾಷೆಗಳ ಮೂಲ ಸಂಸ್ಕೃತ. ಸಂಸ್ಕೃತವು ಈ ಭಾಷೆಗಳಿಗೆ ಶಬ್ದಕೋಶವನ್ನು ಒದಗಿಸಿದೆ. ಈ ಇಂಡೋ-ಆರ್ಯನ್ ಭಾಷೆ ಭಾರತೀಯ ಉಪಖಂಡಕ್ಕೆ ಮಾತ್ರವಲ್ಲದೆ ಯುರೋಪಿಯನ್ ಖಂಡಕ್ಕೂ ಹರಡಿತು. ಇಂತಹ ಶ್ರೇಷ್ಠ ಭಾಷೆಯ ಹಿರಿಮೆಯನ್ನು ಅರಿಯಲು ಭಾರತೀಯರು ಈ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!