Sunday, December 10, 2023

Latest Posts

ಕಾವೇರಿ ನದಿ ವಿವಾದ: ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾವೇರಿ ನದಿ ವಿವಾದದ (Cauvery River Dispute) ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀರು ಹಂಚಿಕೆ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸರ್ಕಾರ ನಮ್ಮ ನಾಡಿನ ಜನರ ರಕ್ಷಣೆಗೆ ಬೆಂಬಲ ಕೊಡಬೇಕು. ಕಾವೇರಿ, ಮಹದಾಯಿ, ಹೇಮಾವತಿ ರಕ್ಷಣೆಗೆ ನಾವು ಬದ್ಧರಾಗಿರಬೇಕು ಎಂದರು.

ಈಗ ಸುಪ್ರೀಂಕೋರ್ಟ್​ಗೆ ಹೋಗುವುದರಿಂದ ಪರಿಹಾರ ಸಿಗಲಾರದು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಚರ್ಚೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಡಿಸಿಎಂ ಡಿಕೆ ಶಿವಕುಮಾರ್ ಅವರು 10,000 ಕ್ಯೂಸೆಕ್ ನೀರು ಒಳ ಹರಿವು ಇದೆ ಎಂದು ಹೇಳಿದ್ದಾರೆ. ಮೆಟ್ಟೂರು ಡ್ಯಾಮ್​ನಲ್ಲಿ 11 ಟಿಎಂಸಿ ನೀರು ಇರುವ ಬಗ್ಗೆ ವರದಿ ಇದೆ. ಮೆಟ್ಟೂರು ಜಲಾಶಯಕ್ಕೆ 7 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ತಮಿಳುನಾಡಿನ ಮೆಟ್ಟೂರಿನಿಂದ 6500 ಕ್ಯೂಸೆಕ್ ಹೊರಹರಿವು ಇದೆ. ಕಾಂಗ್ರೆಸ್​​ ಈ ವಿಚಾರಗಳನ್ನು ಡೈವರ್ಟ್​ ಮಾಡುವ ಕೆಲಸ ಮಾಡುತ್ತಿದೆ ಎಂದ ವಾಗ್ದಾಳಿ ನಡೆಸಿದರು.

ಸೆಪ್ಟೆಂಬರ್ 29 ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರೆ ನೀಡಲಾಗಿರುವ ಕರ್ನಾಟಕ ಬಂದ್​ಗೆ ನಮ್ಮ ನಮ್ಮ ಬೆಂಬಲ ಇದೆ ಎಂದು ಹೆಚ್​​​ಡಿ ಕುಮಾರಸ್ವಾಮಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!