ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಾಡಿನ ಪ್ರಸಿದ್ಧ ರಾಜಕಾರಣಿ ಸೀಮನ್ ವಿರುದ್ಧ ಗರ್ಭಪಾತ ಮತ್ತು ಲೈಂಗಿಕ ಆರೋಪ ಹೊರಿಸಿದ್ದನಟಿ ವಿಜಯಲಕ್ಷ್ಮಿಗೆ ಮದ್ರಾಸ್ ಹೈಕೋರ್ಟ್ (Madras High Court) ಸಮನ್ಸ್ ನೀಡಿದೆ.
2011ರಲ್ಲಿ ಸೀಮನ್ ತಮ್ಮನ್ನು ಮದುವೆಯಾಗಿ, ಹಲವಾರು ರೀತಿಯ ಹಿಂಸೆಗಳನ್ನು ಕೊಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಆನಂತರ 2012ರಲ್ಲಿ ವಿಜಯಲಕ್ಷ್ಮಿ ದೂರು ಹಿಂಪಡೆದಿದ್ದರು. ಆದರೂ, ಇತ್ತೀಚೆಗಷ್ಟೇ ಹಳೆಯ ದೂರನ್ನು ಮರುಪರೀಶಿಲಿಸಬೇಕು ಎಂದು ಮನವಿ ಮಾಡಿದ್ದರು. ಹಾಗಾಗಿ ಕೇಸ್ ಮತ್ತೆ ಕೋರ್ಟ್ ಮೆಟ್ಟಿಲು ಏರಿತ್ತು.
ಆದ್ರೆ ಮತ್ತೆ ನಟಿ ವಿಜಯಲಕ್ಷ್ಮಿದೂರನ್ನು ವಾಪಸ್ಸು ಪಡೆದು, ಸೀಮನ್ ವಿರುದ್ಧ ನನಗೆ ಸೋಲಾಗಿದೆ. ನಾನು ಸೋಲು ಒಪ್ಪಿಕೊಂಡು ಕೇಸ್ ವಾಪಸ್ಸು ಪಡೆಯುತ್ತಿದ್ದೇನೆ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ನಾನು ತಮಿಳು ನಾಡಿನಲ್ಲಿ ಇರಲಾರೆ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.
ಹೀಗಾಗಿ ಕೇಸ್ ಹಿಂಪಡೆದ ವಿಚಾರವನ್ನು ಪೊಲೀಸರು ಕೋರ್ಟ್ ಗೆ ಸಲ್ಲಿಸಿದ್ದರು. ಕೋರ್ಟ್ ವಿಜಯಲಕ್ಷ್ಮಿಗೆ ಸೆಪ್ಟೆಂಬರ್ 29ಕ್ಕೆ ಕೋರ್ಟಿಗೆ ಹಾಜರಾಗುವಂತೆ ಮದ್ರಾಸ್ ಹೈಕೋರ್ಟ್ (Madras High Court) ಸಮನ್ಸ್ ನೀಡಿದೆ.