ಆರ್ಟಿಸ್ಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಕಾವ್ಯಶ್ರೀ ಕಪಿಲ್

ಹೊಸದಿಗಂತ ವರದಿ ಮಡಿಕೇರಿ :

ಅಡ್ವಾನ್ಸ್ಡ್ ಗ್ರೋಥ್ ಲರ್ನಿಂಗ್ (ಎಜಿಎಲ್) ಸಂಸ್ಥೆ ಕೊಡಮಾಡುವ ಆರ್ಟಿಸ್ಟ್ ಆಫ್ ದಿ ಇಯರ್ ಪ್ರಶಸ್ತಿಗೆ ಮಡಿಕೇರಿಯ ಕಾವ್ಯಶ್ರೀ ಕಪಿಲ್ ಅವರು ಭಾಜನರಾಗಿದ್ದಾರೆ.

ಕಲಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ಮಡಿಕೇರಿಯ ಕಲಾ ಕಾವ್ಯ ನಾಟ್ಯ ಶಾಲೆಯ ಗುರುಗಳಾಗಿರುವ ಇವರು ನಗರದ ಬಾಲಭವನದಲ್ಲಿ ಭರತನಾಟ್ಯ ತರಗತಿ ನಡೆಸುತ್ತಿದ್ದಾರೆ.

ಮಡಿಕೇರಿಯಲ್ಲಿ ವಕೀಲರಾಗಿರುವ ಕಪಿಲ್ ಕುಮಾರ್ ದುಗ್ಗಳ ಅವರ ಪತ್ನಿಯಾಗಿರುವ ಕಾವ್ಯಶ್ರೀ ಅವರಿಗೆ ಎಎಲ್ ಜಿ ಸಂಸ್ಥೆಯ ಸಂಸ್ಥಾಪಕ ರಾಜೇಶ್ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!