October 10, 2026
Saturday, October 10, 2026
spot_img

ನೆಗೆಟಿವ್ ವಿಮರ್ಶಕರಿಗೆ ‘ಕೆಡಿ’ ತಂಡದಿಂದ ಶಾಕ್: ಬುಕ್ ಮೈ ಶೋ ರೇಟಿಂಗ್ ಆಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ರಂಗದಲ್ಲಿ ಇಂದು ಕೇವಲ ಕಲೆ ಮಾತ್ರವಲ್ಲ, ವ್ಯವಹಾರವೂ ಅಷ್ಟೇ ಮುಖ್ಯ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ ಸಿನಿಮಾಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ‘ನೆಗೆಟಿವ್ ವಿಮರ್ಶೆ’ ನೀಡುವ ಮೂಲಕ ತೊಂದರೆ ಕೊಡುವುದು ಸಾಮಾನ್ಯವಾಗಿದೆ. ಈ ‘ರೇಟಿಂಗ್ ಸಮರ’ವನ್ನು ಮೆಟ್ಟಿ ನಿಲ್ಲಲು ಕನ್ನಡ ಚಿತ್ರರಂಗ ಹೊಸದೊಂದು ದಾರಿ ಕಂಡುಕೊಂಡಿದೆ. ಇತ್ತೀಚೆಗೆ ತೆರೆಕಂಡ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ.

ಏಪ್ರಿಲ್ 30ರಂದು ಅದ್ಧೂರಿಯಾಗಿ ಬಿಡುಗಡೆಯಾದ ‘ಕೆಡಿ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಈ ಚಿತ್ರದ ಬಗ್ಗೆ ಉದ್ದೇಶಪೂರ್ವಕವಾಗಿ ಕೆಟ್ಟ ರೇಟಿಂಗ್ ನೀಡಿ ಸಿನಿಮಾ ಹಾಳು ಮಾಡಲು ಸಂಚು ರೂಪಿಸಿದ್ದವರಿಗೆ ಚಿತ್ರತಂಡ ಶಾಕ್ ನೀಡಿದೆ. ಹೌದು, ಬುಕ್ ಮೈ ಶೋ ಆ್ಯಪ್‌ನಲ್ಲಿ ಸಿನಿಮಾಗೆ ರೇಟಿಂಗ್ ನೀಡುವ ಆಯ್ಕೆಯನ್ನೇ ಈ ಬಾರಿ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಅನಗತ್ಯ ನೆಗೆಟಿವಿಟಿಗೆ ಕಡಿವಾಣ ಹಾಕಲಾಗಿದೆ.

ಇದನ್ನೂ ಓದಿ:

ಈ ಟ್ರೆಂಡ್ ಆರಂಭವಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಡೆವಿಲ್’ ಚಿತ್ರದಿಂದ. ದರ್ಶನ್ ಅವರು ಜೈಲಿನಲ್ಲಿರುವಾಗ ಸಿನಿಮಾ ರಿಲೀಸ್ ಆದ ಕಾರಣ, ಚಿತ್ರದ ಮೇಲೆ ಯಾರಾದರೂ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ದಾಳಿ ಮಾಡಬಹುದು ಎಂಬ ಆತಂಕ ಚಿತ್ರತಂಡಕ್ಕಿತ್ತು. ಆಗ ‘ಐಪ್ಲೆಕ್ಸ್’ ಮೂಲಕ ಕಾನೂನು ಹೋರಾಟ ನಡೆಸಿ ಬುಕ್ ಮೈ ಶೋನಲ್ಲಿ ರೇಟಿಂಗ್ ತಡೆಹಿಡಿಯುವಲ್ಲಿ ‘ಡೆವಿಲ್’ ತಂಡ ಯಶಸ್ವಿಯಾಗಿತ್ತು.

ಸಿನಿಮಾ ವಿಮರ್ಶೆ ಎಂಬುದು ವೈಯಕ್ತಿಕವಾದರೂ, ಸ್ಟಾರ್ ವಾರ್ ಅಥವಾ ಫ್ಯಾನ್ಸ್ ವಾರ್‌ಗಳ ಕಾರಣದಿಂದ ಒಂದು ಸಿನಿಮಾವನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿರುತ್ತವೆ. ರೇಟಿಂಗ್ ಆಫ್ ಮಾಡುವುದರಿಂದ ಸಿನಿಮಾದ ಕಲೆಕ್ಷನ್ ಮೇಲೆ ಧನಾತ್ಮಕ ಪರಿಣಾಮ ಬೀರಲಿದ್ದು, ನಿಜವಾದ ಸಿನಿಮಾ ಪ್ರೇಮಿಗಳು ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಪ್ರೇರಣೆ ನೀಡಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಚಿತ್ರರಂಗದ ಹೊಸ ಮಾನದಂಡವಾಗುವುದರಲ್ಲಿ ಸಂಶಯವಿಲ್ಲ.

Must Read