ಸುಳ್ಳು ಭರವಸೆ ನೀಡಿ ಹಗಲು ಹೊತ್ತಿನಲ್ಲಿ ಲೂಟಿ ಮಾಡುವ ಕಾಂಗ್ರೆಸ್ ಅನ್ನು ಮಹಾರಾಷ್ಟ್ರದಿಂದ ದೂರವಿಡಿ: ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರವನ್ನು ಉಳಿಸಲು ಕಾಂಗ್ರೆಸ್ ಅನ್ನು ದೂರ ಇಡಬೇಕು. ಯಾವ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿ ಜನರಿಗೆ ಮತ ನೀಡುವಂತೆ ಒತ್ತಾಯಿಸಿತು. ಬಳಿಕ ಗೆದ್ದು ಕಾಂಗ್ರೆಸ್​ಗೆ ತನ್ನ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಅದರ ಬದಲಿಗೆ, ಕಾಂಗ್ರೆಸ್ ಕರ್ನಾಟಕದಲ್ಲಿ ಸುಲಿಗೆ ಪ್ರಚಾರ ನಡೆಸುತ್ತಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ದೂರವಿಡುವ ಜವಾಬ್ದಾರಿ ನಿಮ್ಮದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪುಣೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ನರೇಂದ್ರ ಮೋದಿ, ಮಹಾರಾಷ್ಟ್ರ ಮತ್ತು ಪುಣೆಯಲ್ಲಿ “ಡಬಲ್ ಇಂಜಿನ್” ಸರ್ಕಾರವು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ಬಿಜೆಪಿ ಯಾವಾಗಲೂ ಮಧ್ಯಮ ವರ್ಗಕ್ಕೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ದಿನಕ್ಕೊಂದು ಹಗರಣಗಳು ಬಯಲಾಗುತ್ತಿವೆ. ಕಾಂಗ್ರೆಸ್ ಹಗಲು ಹೊತ್ತಿನಲ್ಲಿ ಜನರನ್ನು ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪುಣೆಯ ಜನರನ್ನು ಸಬಲೀಕರಣಗೊಳಿಸಲು ಮೂಲಸೌಕರ್ಯ, ಹೂಡಿಕೆ ಮತ್ತು ಕೈಗಾರಿಕೆ ಈ ಮೂರೂ ಅಗತ್ಯವಿದೆ. ನಾವು ಅದರ ಪ್ರತಿಯೊಂದು ಅಂಶದಲ್ಲೂ ಕೆಲಸ ಮಾಡಿದ್ದೇವೆ. ಕಳೆದ 10 ವರ್ಷಗಳಲ್ಲಿ ಎಫ್‌ಡಿಐ ಗಣನೀಯವಾಗಿ ಹೆಚ್ಚಾಗಿದೆ. ಹೂಡಿಕೆ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಪುಣೆ ಯಾವಾಗಲೂ ಬಿಜೆಪಿಯ ಸಿದ್ಧಾಂತ ಮತ್ತು ದೃಷ್ಟಿಕೋನವನ್ನು ಬೆಂಬಲಿಸುತ್ತದೆ. ಈ ವಿಶ್ವಾಸಕ್ಕಾಗಿ ಪುಣೆಯ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಹೊಸ ಮಹಾಯುತಿ ಸರ್ಕಾರವು ಪುಣೆ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ವೇಗವಾಗಿ ಕೆಲಸ ಮಾಡುತ್ತದೆ ಎಂದು ನಿಮಗೆ ಭರವಸೆ ನೀಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!