Sunday, June 4, 2023

Latest Posts

HEALTH | ಈ ಆಹಾರ ನಿಮ್ಮ ಮೆನುವಿನಲ್ಲಿರಲಿ…ರೋಗದಿಂದ ಖಂಡಿತಾ ದೂರ ಇರ್ತೀರಾ!

ವ್ಹಾವ್..ಈ ಕಾಯಿ ಇಷ್ಟಪಡದವರು ಯಾರು ಹೇಳಿ…? ನುಗ್ಗೆಕಾಯಿ ಸಾಂಬಾರ್‌ ಅಂದ್ರೆ ಅದೇನು ರುಚಿ!. ಬಾಯಲ್ಲಿ ನೀರೂರುತ್ತೆ. ನುಗ್ಗೆ ಕೋಡನ್ನು ಜಗಿದು ಅದರ ರಸ ಹೀರುವುದೇ ಒಂದು ಖುಷಿ. ಈ ರೀತಿಯ ನುಗ್ಗೆ ಅಬಾಲ ವೃದ್ದರಾದಿಯಾಗಿ ಪ್ರತಿಯೊಬ್ಬರೀಗೂ ಪ್ರಿಯವಾದ ತರಕಾರಿ.

ಇದು ಅನೇಕ ರೋಗಗಳಿಗೆ ರಾಮಭಾಣವಾಗಿದೆ. ಇದರಲ್ಲಿರುವ ಪೋಷಕಾಂಶಗಳು ದೇಹಾರೋಗ್ಯವನ್ನು ಹೆಚ್ಚಿಸುತ್ತದೆ. ನುಗ್ಗೆ ಕಾಯಿ ಹಾಗೂ ನುಗ್ಗೆ ಸೊಪ್ಪು ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರವೆಂದೇ ಪರಿಗಣಿಸಲಾಗಿದೆ. ಅಧಿಕ ಕೊಲೆಸ್ಟ್ರಾಲ್‌, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಉಪಯೋಗಿಸಬಹುದಾಗಿದೆ. ನುಗ್ಗೇ ಕಾಯಿ ಸೇವನೆಯಿಂದ ಚರ್ಮ ಮತ್ತು ಕೂದಲ ಆರೋಗ್ಯ ಬೆಳವಣಿಗೆಯಾಗುತ್ತದೆ.

ನಿಯಮಿತವಾದ ನುಗ್ಗೆ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ. ಹೃದಯ ನಾಳಗಳಲ್ಲಿ ಶೇಖರವಾಗಿರುವ ಕೊಲೆಸ್ಟ್ರಾಲ್‌ ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಲಿವರ್‌ ಸಂಬಂಧೀ ಕಾಯಿಲೆಯನ್ನು ದೂರಮಾಡಿ ಆರೋಗ್ಯ ವೃದ್ದಿಸುತ್ತದೆ. ನುಗ್ಗೆಯಲ್ಲಿರುವ ಪೋಷಕಾಂಶಗಳು ರಕ್ತದಲ್ಲಿರುವ ಸಕ್ಕರೆ ಮತ್ತು ಇನ್ಸುಲಿನ್‌ ಪ್ರಮಾಣವನ್ನು ಸಮರ್ಪಕವಾಗಿ ನಿರ್ವಹಿಸಲು ಸಹಕಾರಿಯಾಗಿದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ  ದೇಹದಲ್ಲಿ ರಕ್ತದೊತ್ತಡ ನಿಯಂತ್ರಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!