October 14, 2026
Wednesday, October 14, 2026
spot_img

ಹೊಸ ದಾಖಲೆ ಬರೆದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 2025-26ನೇ ಹಣಕಾಸು ವರ್ಷದಲ್ಲಿ 40 ಕೋಟಿ ಪ್ರಯಾಣಿಕರ ಪ್ರಯಾಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2025-26ನೇ ಹಣಕಾಸು ವರ್ಷದಲ್ಲಿ ಹೊಸ ದಾಖಲೆ ಬರೆದಿದೆ.

ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮೈಲಿಗಲ್ಲು ಸಾಧಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಈವರೆಗೆ 40 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, 5 ಲಕ್ಷದ 32 ಸಾವಿರ ಮೆಟ್ರಿಕ್ ಟನ್ ಸರಕುಗಳನ್ನು ಸಾಗಿಸಲಾಗಿದೆ.

ಇದನ್ನೂ ಓದಿ:

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL)ದ 134ನೇ ಮಂಡಳಿ ಸಭೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಐಎಎಲ್ (KIAL) ಕೈಗೊಂಡ ಪ್ರಮುಖ ಸಾಧನೆಗಳು, ಕಾರ್ಯಕ್ಷಮತೆಯ ಮುಖ್ಯಾಂಶಗಳು ಮತ್ತು ಅಭಿವೃದ್ಧಿ ಉಪಕ್ರಮಗಳ ಪರಿಶೀಲನೆ ವೇಳೆ ಮಂಡಳಿ ಈ ವಿಷಯ ತಿಳಿಸಿದೆ. ಒಂದೇ ದಿನದಲ್ಲಿ 1 ಲಕ್ಷದ 39 ಸಾವಿರದ 111 ಪ್ರಯಾಣಿಕರನ್ನು ನಿರ್ವಹಿಸಲಾಗಿದೆ. ವರ್ಷದಲ್ಲಿ 2 ಲಕ್ಷದ 80 ಸಾವಿರದ 800 ವಿಮಾನಗಳ ಸಂಚಾರವು ದಾಖಲಾಗಿದೆ.

Must Read