July 18, 2026
Saturday, July 18, 2026
spot_img

ಕೈಯಲ್ಲಿ ಭಗವದ್ಗೀತೆ ಹಿಡಿದ ಕೀನ್ಯಾದ ಶಾಸಕ: ವೈರಲ್ ಆಯ್ತು ಪ್ರಮಾಣವಚನ ಪ್ರಸಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೀನ್ಯಾದ ಮೊಂಬಾಸಾ ಕೌಂಟಿಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಯುವ ನಾಯಕ ಕ್ಯಾಲೆಬ್ ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಶಪಥ ಸ್ವೀಕರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಈ ಯುವ ಶಾಸಕ ವಿಧಾನಸಭೆಯ ಸದಸ್ಯರ ಸಮ್ಮುಖದಲ್ಲಿ “ಭಗವದ್ಗೀತೆ ಆಸ್ ಇಟ್ ಈಸ್” ಗ್ರಂಥವನ್ನು ಎತ್ತಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ:

ಈ ನಡೆ ಪ್ರಚಾರಕ್ಕಾಗಿ ಅಲ್ಲ, ಆಂತರಿಕ ನಂಬಿಕೆಯ ಅಭಿವ್ಯಕ್ತಿ ಎಂದು ISKCONಗೆ ಸೇರಿದ ಓಂಕಾರ ಮುಕುಂದ ದಾಸ್ ಪ್ರತಿಕ್ರಿಯಿಸಿದ್ದಾರೆ. ಹರೇ ಕೃಷ್ಣ ಸಮುದಾಯದೊಂದಿಗೆ ಸಂಪರ್ಕ ಹೊಂದಿರುವ ಕ್ಯಾಲೆಬ್, ತಮ್ಮ ಅಣ್ಣನ ಮೂಲಕ ಇಸ್ಕಾನ್ ಚಟುವಟಿಕೆಗಳಿಗೆ ಸೇರಿಕೊಂಡಿದ್ದರು. 2021ರಲ್ಲಿ ಮೊಂಬಾಸಾದಲ್ಲಿ ಆರಂಭವಾದ “ದಿ ಬೆಟರ್ ಯು ಕ್ಲಬ್” ಮೂಲಕ ವಿದ್ಯಾರ್ಥಿಗಳಲ್ಲಿ ವೈಷ್ಣವ ಸಂಸ್ಕೃತಿ ಪರಿಚಯಿಸಲು ಅವರು ಮುನ್ನಡೆ ವಹಿಸಿದ್ದು, ಕ್ಲಬ್ ಸದಸ್ಯರ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಿದ್ದಾರೆ.

ಮೊಂಬಾಸಾ ಯುವ ಅಸೆಂಬ್ಲಿ ಕೀನ್ಯಾ ಯುವ ಅಸೆಂಬ್ಲಿ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯುವಕರಿಗೆ ರಾಜಕೀಯ ಜವಾಬ್ದಾರಿಯ ಅರಿವು ಮೂಡಿಸುವ ವೇದಿಕೆಯಾಗಿದೆ. ಹಿಂದೆ ಕೆನಡಾದ ಅನಿತಾ ಆನಂದ್ ಸೇರಿದಂತೆ ಹಲವು ಭಾರತೀಯ ಮೂಲದ ನಾಯಕರು ಗೀತೆಯೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಕೀನ್ಯಾದಲ್ಲಿ ಈ ಘಟನೆ ವಿಶೇಷ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !