ಹರತಾಳ, ಬಂದ್’ಗಳನ್ನೇ ಬದುಕಾಗಿಸಿಕೊಂಡಿರುವ ಕೇರಳಕ್ಕೆ ಹೈಕೋರ್ಟ್ ಬಿಸಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಎರಡು ದಿನಗಳ ಭಾರತ ಬಂದ್ ಎಂಬುದು ಭಾರತದ ಇನ್ನೆಲ್ಲೂ ಇಲ್ಲ. ಆದರೆ, ಕೇರಳದಲ್ಲಿ ಸರ್ಕಾರಿ ನೌಕರರೂ ಸಹ ಬಂದ್ ಆಚರಿಸುತ್ತಿದ್ದಾರೆ.

ಸೋಮವಾರ ಈ ಬಗ್ಗೆ ಕಟು ನಿರ್ದೇಶನ ನೀಡಿರುವ ಕೇರಳ ಹೈಕೋರ್ಟ್, ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಹರತಾಳಕ್ಕೆ ಸೇರಿಕೊಳ್ಳುವುದನ್ನು ನಿರ್ಬಂಧಿಸಬೇಕು. ಅಲ್ಲದೇ ಬಂದ್ ದಿನಗಳಲ್ಲಿ ಅವರು ಕರ್ತವ್ಯಕ್ಕೆ ತಲುಪಿಕೊಳ್ಳುವುದಕ್ಕೆ ಅನುವಾಗುವಂತೆ ಸಾರಿಗೆ ವ್ಯವಸ್ಥೆಯನ್ನೂ ಮಾಡಬೇಕು ಎಂದು ಹೇಳಿದೆ.

ಹೈಕೋರ್ಟ್ ಚಾಟಿಯಿಂದ ಎಚ್ಚೆತ್ತುಕೊಂಡ ಕೇರಳದ ಪಿಣರಾಯಿ ಸರ್ಕಾರ ‘ಡೈಸ್ ನಾನ್ ನಿರ್ದೇಶನ’ ಅಂದರೆ, ಕೆಲಸ ಮಾಡದಿದ್ದರೆ ಸಂಬಳವೂ ಇಲ್ಲ ಎಂಬ ನಿರ್ದೇಶನವನ್ನು ಜಾರಿ ಮಾಡಿದೆ.

ಕೇರಳಕ್ಕಂಟಿದ ಶಾಪ ಹರತಾಳ

ಸುದೀರ್ಘ ಕಮ್ಯುನಿಸ್ಟ್ ಆಡಳಿತದ ಕಾರಣದಿಂದ ಕೇರಳದಲ್ಲಿ ಕಂಡಿದ್ದಕ್ಕೆಲ್ಲ ಬಂದ್, ಹರತಾಳ ಮಾಡಿಕೊಂಡಿರುವುದು ಸಾಮಾನ್ಯವಾಗಿದೆ. ಇದರ ಪರಿಣಾಮ ಅರ್ಥವ್ಯವಸ್ಥೆ ಮೇಲಾಗುತ್ತಿದೆ. ಸುಶಿಕ್ಷಿತರ ರಾಜ್ಯ ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಯಾವ ಕೈಗಾರಿಕೆಗಳೂ ಅಭಿವೃದ್ಧಿಯಾಗಿಲ್ಲ. ಅದರ ಅರ್ಥ ವ್ಯವಸ್ಥೆ ನಿಂತಿರುವುದು ಗಲ್ಫ್ ರಾಷ್ಟ್ರಗಳಿಗೆ ದುಡಿಯಲು ಹೋದವರು ವಿನಿಮಯದ ಹಣದ ಆಧಾರದ ಮೇಲೆ.

2019ರಲ್ಲಿ ಪ್ರಕಟವಾಗಿದ್ದ ಮಾಧ್ಯಮ ವರದಿಯೊಂದರ ಪ್ರಕಾರ, 2009 ಮತ್ತು 2015ರ ನಡುವೆ ಕೇರಳದಲ್ಲಿ ಕನಿಷ್ಟ 363 ಹರತಾಳಗಳಾಗಿವೆ. ಕೊಚಿನ್ ಚೇಂಬರ್ಸ್ ಆಫ್ ಇಂಡಸ್ಟ್ರಿ ಆಂಡ್ ಕಾಮರ್ಸ್ ಸೇರಿದಂತೆ ಅನೇಕ ಕೈಗಾರಿಕಾ ಸಂಬಂಧಿ ಸಂಸ್ಥೆಗಳು ಕೇರಳದ ಈ ಹರತಾಳ ಪದ್ಧತಿಯಿಂದ ಉದ್ಯಮಗಳು ಕಾರ್ಯನಿರ್ವಹಿಸುವುದೇ ಕಷ್ಟವಾಗಿದೆ ಎಂದು ಹೇಳಿದ್ದಾಗಿದೆ. ಇದೇ ಕೈಗಾರಿಕಾ ಒಕ್ಕೂಟವು ಪ್ರತಿ ಬಂದ್ ಆದಾಗಲೂ ರಾಜ್ಯಕ್ಕೆ 200 ಕೋಟಿ ರುಪಾಯಿಗಳ ನಷ್ಟವಾಗುತ್ತದೆ. ರಾಜ್ಯದ ಮುಖ್ಯ ಆದಾಯವಾದ ಪ್ರವಾಸೋದ್ಯಮದ ಮೇಲೂ ಈ ಬಂದ್ ಮತ್ತು ಹರತಾಳಗಳು ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಅಭಿಪ್ರಾಯಪಟ್ಟಿತ್ತು. ಅದಲ್ಲದೇ, ಅನೇಕ ಉದ್ಯಮಗಳು ಅದಾಗಲೇ ಕೇರಳದಿಂದ ಕಾಲ್ಕಿತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!