Friday, September 30, 2022

Latest Posts

ಕೇರಳದಲ್ಲಿ ಬೆಟ್ಟದ ಮೇಲಿಂದ ಉರುಳಿದ ಬಸ್:‌ ಓರ್ವ ಸಾವು, 58 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೇರಳದ ಎರ್ನಾಕುಲಂ ಕಡೆಗೆ ತೆರಳುತ್ತಿದ್ದ ಕೇರಳದ ಎಸ್‌ಆರ್‌ಟಿಸಿ ಬಸ್ ಇಡುಕ್ಕಿ ಬಳಿಯ ಬೆಟ್ಟದಿಂದ 15 ಅಡಿ ಕೆಳಗೆ ಉರುಳಿದ ಪರಿಣಾಮ ಕನಿಷ್ಠ ಒಬ್ಬರು ಸಾವನ್ನಪ್ಪಿ, 58 ಮಂದಿ ಗಾಯಗೊಂಡಿದ್ದಾರೆ.
ಗುಡ್ಡಗಾಡು ಪ್ರದೇಶವಾದ ಚೀಯಪ್ಪಾರ ಮತ್ತು ನೆರಿಯಮಂಗಲಂ ನಡುವೆ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ನೆರಿಯಮಂಗಲಂನಲ್ಲಿ ಅಪಘಾತ ಸಂಭವಿಸಿದ್ದು, ಬಸ್ ಬೆಟ್ಟದಿಂದ 15 ಅಡಿ ಕೆಳಗೆ ಉರುಳಿಬಿದ್ದಿದೆ. ಬಸ್‌ನ ಟೈರ್ ಬರ್ಸ್ಟ್‌ ಆಗಿದ್ದು ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
“ಇತ್ತೀಚಿನ ವರದಿಯ ಪ್ರಕಾರ, ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೊಬ್ಬ ವ್ಯಕ್ತಿಯ ಸ್ಥಿತಿಯೂ ಗಂಭೀರವಾಗಿದೆ. ಅಪಘಾತದ ಹಿಂದಿನ ಕಾರಣವನ್ನು ನಾವು ಇನ್ನೂ ಖಚಿತಪಡಿಸಿಲ್ಲ. ಬಸ್ ಸುಮಾರು 14-15 ಅಡಿಗಳಷ್ಟು ಮಲೀನಿಂದ ಕೆಳಗೆ ಉರುಳಿದೆ” ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ಸಿನಲ್ಲಿ 60 ಮಂದಿ ಇದ್ದರು ಎಂದು ಬಸ್ ಕಂಡಕ್ಟರ್ ಸುಭಾಷ್ ತಿಳಿಸಿದ್ದಾರೆ.
“ಅಪಘಾತ ಸಂಭವಿಸಿದ ತಕ್ಷಣ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಎದುರಿನಿಂದ ಬಂದ ಯಾವುದೋ ವಾಹನ ಬಸ್‌ಗೆ ಡಿಕ್ಕಿ ಹೊಡೆದಂತೆನಿಸಿತು ಎಂದು ಚಾಲಕ ಹೇಳಿದರು. ಜೋರು ಮಳೆಯಾಗುತ್ತಿದ್ದರಿಂದ ನಾನು ಆಭಾಗದ ಕಿಟಕಿಯ ಶೆಟರ್‌ಗಳನ್ನು ಹಾಕಿಕೊಂಡಿದ್ದೆ. ಏನಾಯ್ತು ಎಂಬುದು ನನಗೆ ತಿಳಿಯಲಿಲ್ಲ ಎಂದು” ಎಂದು ಕಂಡೆಕ್ಟರ್ ಹೇಳಿದರು.
ಎಲ್ಲಾ ಗಾಯಾಳುಗಳನ್ನು ಎರ್ನಾಕುಲಂನ ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!