Tuesday, March 28, 2023

Latest Posts

VIRAL VIDEO| ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್ ಆದ ಕೇರಳದ ಹುಡುಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ ಹುಡುಗನೊಬ್ಬ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾನೆ. ಕಾರಣ ಆರನೇ ತರಗತಿಯ ವಿದ್ಯಾರ್ಥಿ ಫುಟ್‌ಬಾಲ್ ಪಂದ್ಯ ಆಡುವಾಗ ಅದ್ಭುತ ಬ್ಯಾಕ್ ಹೀಲ್ ಗೋಲು ಹೊಡೆದದ್ದು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹುಡುಗನ ಪ್ರತಿಭೆಗೆ ಎಲ್ಲೆಡೆ ಶಹಬ್ಬಾಸ್‌ಗಿರಿ ಸಿಗುತ್ತಿದೆ.

12 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯು ಪಂಡಿಕ್ಕಾಡ್‌ನ ಚೆಂಬ್ರಾಸ್ಸೆರಿಯಲ್ಲಿ ನಡೆಯಿತು. ಅವರ ತರಬೇತುದಾರ ಇಮ್ದಾದ್ ಕೊಟ್ಟಪರಮ್ ಅವರು ಆರನೇ ತರಗತಿಯ ಹುಡುಗ ಗೋಲು ಗಳಿಸುವ ವೀಡಿಯೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚೆಂಡು ಬರುತ್ತಿರುವುದು ಗೋಲ್‌ಕೀಪರ್‌ಗೆ ಕನಿಷ್ಠ ನೋಡಲಾಗಲಿಲ್ಲ. ಹುಡುಗ ಬ್ಯಾಕ್-ಹೀಲ್ ಗೋಲು ಹೊಡೆದದ್ದು ತುಂಬಾ ಅದ್ಭುತವಾಗಿತ್ತು ಎಂಬ ಕಮೆಂಟ್‌ಗಳು ಬರುತ್ತಿವೆ.

ಕೇರಳದ ಸಚಿವರಾದ ವಿ.ಶಿವಕುಟ್ಟಿ ಮತ್ತು ಅಹ್ಮದ್ ದೇವರ್‌ಕೋವ್ ಅವರು ಕೂಡ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ಗೋಲು ಹೊಡೆದ ಹುಡುಗ ಭವಿಷ್ಯದಲ್ಲಿ ಭಾರತದ ಫುಟ್ಬಾಲ್ ತಾರೆಯಾಗುತ್ತಾನೆ ಎಂದು ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಭಾರತದಲ್ಲಿ ಪ್ರತಿಭೆಗೆ ಕೊರತೆ ಇಲ್ಲ, ಅದನ್ನು ಹೊರತರಬೇಕು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!