ಭಾರತದಲ್ಲಿ ಪ್ರಿಮಿಯಂ ಮೊಬೈಲ್‌ ಗಳನ್ನು ತಯಾರಿಸಲಿದೆ ಸ್ಯಾಮ್‌ಸಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಕ್‌ ಇಂಡಿಯಾ, ಆತ್ಮನಿರ್ಭರ ಭಾರತದ ಮೂಲಕ ಜಗತ್ತಿಗೆ ರಫ್ತುದಾರನಾಗ ಹೊರಟಿರೋ ಭಾರತದ ಪ್ರಯಾಣಕ್ಕೀಗ ಇನ್ನೊಂದು ಗರಿ ಮೂಡಿದೆ. ಈಗಾಗಲೇ ಜಗತ್ತಿನ ಪ್ರಸಿದ್ಧ ಟೆಕ್‌ ಕಂಪನಿ ಆಪಲ್‌ ತನ್ನ ಐಫೋನ್‌ ಗಳನ್ನು ಭಾರತದಲ್ಲಿ ತಯಾರಿಸಲು ಶುರುವಿಟ್ಟಿದೆ. ಇದೀಗ ಇನ್ನೊಂದು ಪ್ರಸಿದ್ಧ ಸ್ಮಾರ್ಟ್‌ಫೋನ್‌ ಕಂಪನಿಯು ಭಾರತದಲ್ಲಿ ತನ್ನ ಪ್ರಿಮಿಯಂ ಫೋನ್‌ ಗಳನ್ನು ಉತ್ಪಾದಿಸುವುದಾಗಿ ಹೇಳಿದೆ.

ದಕ್ಷಿಣ ಕೊರಿಯಾದ ಸ್ಮಾರ್ಟ್ ಸಾಧನಗಳ ತಯಾರಕ ಸ್ಯಾಮ್‌ಸಂಗ್ ತನ್ನ ಪ್ರೀಮಿಯಂ ಗ್ಯಾಲಕ್ಸಿ ಎಸ್ 23 ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಉತ್ಪಾದಿಸುವುದಾಗಿ ಘೋಷಿಸಿದೆ.

ಕಂಪನಿಯು ಪ್ರಸ್ತುತ Galaxy S ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ವಿಯೆಟ್ನಾಂನಲ್ಲಿರುವ ತನ್ನ ಕಾರ್ಖಾನೆಯಲ್ಲಿ ಉತ್ಪಾದಿಸುತ್ತದೆ ಮತ್ತು ಅವುಗಳನ್ನು ಭಾರತದಲ್ಲಿ ಮಾರಾಟಕ್ಕೆ ಆಮದು ಮಾಡಿಕೊಳ್ಳುತ್ತದೆ. ಈ ಹೊಸ ಕ್ರಮದೊಂದಿಗೆ, ಭಾರತದಲ್ಲಿ ಮಾರಾಟವಾಗುವ ಎಲ್ಲಾ Galaxy S23 ಸ್ಮಾರ್ಟ್‌ಫೋನ್‌ಗಳು ಸ್ಯಾಮ್‌ಸಂಗ್‌ನ ನೋಯ್ಡಾ ಕಾರ್ಖಾನೆಯಲ್ಲಿ ತಯಾರಾಗಲಿವೆ. ಮುಂದಿನ ದಿನಗಳಲ್ಲಿ ಇವು ಜಗತ್ತಿನಾದ್ಯಂತ ಪೂರೈಕೆಯಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!