September 2, 2026
Wednesday, September 2, 2026
spot_img

ದಕ್ಷಿಣ ಕನ್ನಡದಲ್ಲಿ ಭ್ರಷ್ಟರ ಬೆವರಿಳಿಸಿದ ಲೋಕಾಯುಕ್ತ: ಸುಳ್ಯ ಸಹಿತ ತಾಲೂಕು ಕಚೇರಿಗಳಲ್ಲಿ ಹಠಾತ್ ದಾಖಲೆ ಪರಿಶೀಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಲೋಕಾಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಹಮ್ಮಿಕೊಂಡಿರುವ ತಾಲೂಕು ಕಚೇರಿಗಳ ಮೇಲಿನ ಏಕಾಏಕಿ ದಾಳಿಯ ಭಾಗವಾಗಿ ಸುಳ್ಯ ತಾಲೂಕು ಕಚೇರಿಯಲ್ಲಿಯೂ ತಪಾಸಣೆ, ಕಡತಗಳ ಪರಿಶೀಲನೆ ನಡೆಯುತ್ತಿದೆ.

ಉಡುಪಿ ಲೋಕಾಯುಕ್ತ ಡಿವೈ ಎಸ್ ಪಿ ಹಾಲ್ ಮೂರ್ತಿ ರಾವ್ ನೇತೃತ್ವದಲ್ಲಿ ಪೋಲಿಸ್ ಅಧಿಕಾರಿಗಳಿಂದ ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ಪ್ರಾರಂಭಿಸಿದ್ದು ಅಧಿಕಾರಿಗಳ ಮೊಬೈಲ್ ಗಳಲ್ಲಿನ ಗೂಗಲ್ ಪೇ ಮತ್ತು ಫೋನ್ ಪೇ ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಯನ್ನು ಕುಳ್ಳಿರಿಸಿ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಎಲ್ಲಾ ಪ್ರಕ್ರಿಯೆಗಳ ವೀಡಿಯೋ ಚಿತ್ರಿಕರಣಗಳನ್ನು ಕೂಡಾ ನಡೆಸಲಾಗುತ್ತಿದೆ.

ತಂಡದಲ್ಲಿ ಸಿಬ್ಬಂದಿಯಾದ ನಾಗೇಶ್ ಉಡುಪ , ನಾಗರಾಜ್ , ಪುಷ್ಪಾವತಿ , ಸುದೀಪ್ , ರವಿ ಜೊತೆಗೆ ಲೋಕಾಯುಕ್ತ ಪೋಲೀಸ್ ಅಧಿಕಾರಿಗಳ ಸ್ಥಳೀಯ ಸರಪಂಚರು ಇದ್ದಾರೆ.

ಸಾವರ್ಜನಿಕರಿಂದ ಮಾಹಿತಿ ಸಂಗ್ರಹ

ತಾಲೂಕು ಕಚೇರಿಯಲ್ಲಿ ಕುಳಿತುಕೊಂಡಿದ್ದ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರನ್ನು ಲೋಕಾಯುಕ್ತ ಪೋಲಿಸ್ ಅಧಿಕಾರಿಗಳು ಪ್ರಶ್ನಿಸಿ‌ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದಾರೆ. ಕಡತಗಳನ್ನು ಪರಿಶೀಲನೆ ಹಾಗೂ ಸಾರ್ವಜನಿಕರ ಬ್ಯಾಗ್ ಹಾಗೂ ಬ್ರೋಕರ್ ಗಳ ಹಾವಳಿ ಕುರಿತಾಗಿಯು ಪ್ರಶ್ನಿಸುತ್ತಿದ್ದು ಪರಿಶೀಲನೆ ಮುಂದುವರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !