ಕೇರಳ ಸಿಎಂ ಪುತ್ರಿ ವಿರುದ್ಧ ಅಕ್ರಮ ಹಣ ಸಂದಾಯ ಆರೋಪ: ಬಲವಂತದ ಬಂಧನ ಬೇಡ ಎಂದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಹಣ ಸಂದಾಯ ಪ್ರಕರಣ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಪುತ್ರಿ, ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈ.ಲಿ. ನಿರ್ದೇಶಕಿ ಟಿ.ವೀಣಾ ಅವರ ವಿರುದ್ಧ ಬಲವಂತದ ಬಂಧನದಂತಹ ಕ್ರಮಗಳನ್ನು ಕೈಗೊಳ್ಳದಂತೆ ಕೇಂದ್ರ ಸರ್ಕಾರದ ತನಿಖಾ ದಳ ಎಸ್ಎಫ್ಐಒಗೆ ಕರ್ನಾಟಕ ಹೈಕೋರ್ಟ್ (Karnataka High Court) ಸೂಚನೆ ನೀಡಿದೆ.

ಯಾವುದೇ ಸೇವೆ ನೀಡದಿದ್ದರೂ ಕೊಚ್ಚಿನ್ ಮಿನರಲ್ಸ್‌ನಿಂದ ಕೇರಳದ ರಾಜಕೀಯ ವ್ಯಕ್ತಿಗಳಿಗೆ 135 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಅಂಶ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ತಿಳಿದುಬಂದಿತ್ತು. ಈ ಹಣದ ಪೈಕಿ 1.72 ಕೋಟಿ ರೂಪಾಯಿಗಳನ್ನು ಟಿ.ವೀಣಾ ನಿರ್ದೇಶಕಿಯಾಗಿರುವ ಕರ್ನಾಟಕದಲ್ಲಿರುವ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈ.ಲಿ.ಗೆ ವರ್ಗಾವಣೆಯಾಗಿರುವುದು ಕಂಡುಬಂದಿತ್ತು.ಯಾವುದೇ ಸೇವೆ ನೀಡದಿದ್ದರೂ ಹಣ ಸಂದಾಯ ಮಾಡಿದ ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಎಸ್ಎಫ್ಐಒ ಗಮನಕ್ಕೆ ತಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್ಎಫ್ಐಒ ತನಿಖೆ ನಡೆಸುತ್ತಿದೆ. ಇದರ ವಿರುದ್ಧ ವೀಣಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ತನಿಖಾದಳಕ್ಕೆ ಕಂಪನಿ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿತು. ಅಲ್ಲದೆ, ಯಾವುದೇ ಬಂಧನದಂತಹ ಬಲವಂತದ ಕ್ರಮ ಕೈಗೊಳ್ಳದಂತೆ ಎಸ್ಎಫ್ಐಒ ಸೂಚನೆ ನೀಡಿದೆ .

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!