ಶ್ರೀಲಂಕಾ, ಮಾರಿಷಸ್‌ನಲ್ಲಿ UPI ಸೇವೆ ಪ್ರಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಯುಪಿಐ ಆಧರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಇನ್ಮುಂದೆ ಯುಪಿಐ ಮಾತ್ರವಲ್ಲದೆ ಭಾರತದ ರುಪೇ ಕಾರ್ಡ್‌ ಅನ್ನು ಕೂಡ ಮಾರಿಷಸ್‌ನಲ್ಲಿ ಬಳಸಬಹುದಾಗಿದೆ.

ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗನೌತ್‌ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಜತೆಗೆ ಕಾರ್ಯಕ್ರಮಕ್ಕೆ ವರ್ಚುವಲ್‌ ಮೂಲಕ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ‘ಆಧುನಿಕ ಡಿಜಿಟಲ್ ತಂತ್ರಜ್ಞಾನದೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಜೋಡಿಸಲಾಗಿದೆ’ ಎಂದು ಬಣ್ಣಿಸಿದ್ದಾರೆ.

ಶ್ರೀಲಂಕಾ ಮತ್ತು ಮಾರಿಷಸ್‌ ಯುಪಿಐ ಬಳಕೆಯಿಂದ ಸಾಕಷ್ಟು ಉಪಯೋಗಗಳನ್ನು ಪಡೆಯಲಿದೆ ಎಂದು ಭಾವಿಸುತ್ತೇನೆ. ಯುಪಿಐ ಭಾರತದೊಂದಿಗೆ ಪಾಲುದಾರರನ್ನು ಒಗ್ಗೂಡಿಸುವ ಹೊಸ ಜವಾಬ್ದಾರಿಯನ್ನು ಕಾರ್ಯಗತಗೊಳಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಡಿಜಿಟಲ್ ಪಾವತಿಯು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ನೈಸರ್ಗಿಕ ವಿಪತ್ತು, ಆರೋಗ್ಯ ಸಂಬಂಧಿತ, ಆರ್ಥಿಕ ಅಥವಾ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮೊದಲು ಪ್ರತಿಸ್ಪಂದಿಸುವ ರಾಷ್ಟ್ರ ಎಂದರೆ ಭಾರತ. ಅದು ಹೀಗೆಯೇ ಮುಂದುವರಿಯುತ್ತದೆ ಎಂದರು.

ಇದರಿಂದಾಗಿ ಭಾರತೀಯರು ಮಾರಿಷಸ್‌ ಮತ್ತು ಶ್ರೀಲಂಕಾಕ್ಕೆ ಪ್ರಯಾಣಿಸಿದರೆ ಅಥವಾ ಅವೆರಡೂ ದೇಶದವರು ಭಾರತಕ್ಕೆ ಬಂದಾಗ ಹಣ ಪಾವತಿ ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!