ವಿದ್ಯಾರ್ಥಿಗಳ‌ ನಡುವೆ ಪರದೆ: ವಿವಾದಕ್ಕೆ ಕಾರಣವಾಗಿದೆ ವೈದ್ಯಕೀಯ ಕಾಲೇಜಿನ ‘ಕ್ಲಾಸ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ ವೈದ್ಯಕೀಯ ಕಾಲೇಜಿನ ತರಗತಿ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಪರದೆ ಹಾಕಿ ತರಗತಿ ನಡೆಸಿರುವುದು ವಿವಾದಕ್ಕೀಡಾಗಿದೆ. ಮುಜಾಹಿದ್ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ಎಂಬ ಇಸ್ಲಾಮಿಕ್ ಗುಂಪು ಕೇರಳದ ತ್ರಿಶೂರ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಗತಿ ಏರ್ಪಡಿಸಿತ್ತು. ಇಲ್ಲಿ ಭಾಗವಹಿಸಿದ್ದ ವೈದ್ಯ ವಿದ್ಯಾರ್ಥಿ/ವಿದ್ಯಾರ್ಥಿನಿಯರ ನಡುವೆ ಕರ್ಟನ್‌ ಹಾಕಿ ತರಗತಿ ನಡೆಸಿದ್ದಾರೆ.

‘ಬಿಹೈಂಡ್ ರೈನ್ ಬೋ ಫ್ಲಾಗ್ಸ್ ಅಂಡರ್ ಸ್ಟಾಂಡಿಂಗ್ʼ ಹೆಸರಿನಲ್ಲಿ ನಡೆದ ಈ ತರಗತಿಗಳಲ್ಲಿ ಲಿಂಗ ತಾರತಮ್ಯ ನಡೆದುದರ ಬಗ್ಗೆ ಇದೀಗ ಬಿಸಿಬಿಸಿ ಚರ್ಚೆಯಾಗುತ್ತಿದೆ. ಮುಸ್ಲಿಂ ಸಂಘಟನೆಯ ಸದಸ್ಯರೊಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಲೆ ಈ ವಿಚಾರ ಬೆಳಕಿಗೆ ಬಂದದ್ದು.

ಇದನ್ನು ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು, ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಮತ್ತು ಎಡಪಂಥೀಯ ವಿದ್ಯಾರ್ಥಿ ಘಟಕ ತೀವ್ರವಾಗಿ ಖಂಡಿಸಿವೆ. ವಿದ್ಯಾರ್ಥಿಗಳ ನಡುವಿನ ಪರದೆಗೆ ಕಾರಣವನ್ನು ಯಾರೂ ಪ್ರಶ್ನಿಸಲಿಲ್ಲ ಎಂದು ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಂದ ಮುಸ್ಲಿಂ ಸಂಘಟನೆ ತಲೆಕೆಡಿಸಿಕೊಳ್ಳದೆ ಸಮಜಾಯಿಶಿ ನೀಡಿದೆ. ‘ಲಿಂಗ ರಾಜಕೀಯ’ ಕುರಿತು ಚರ್ಚಿಸಲು ವೈದ್ಯಕೀಯ ಕಾಲೇಜಿನಲ್ಲಿ ಸಭೆ ಆಯೋಜಿಸಿರುವುದಾಗಿ ಹೇಳಿರುವ ಮುಜಾಹಿದ್ ವಿಸ್ಡಮ್ ಇಸ್ಲಾಮಿಕ್ ಸಂಘಟನೆ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!