ವಾಟ್ಸಪ್ ಚಾನಲ್ ಪ್ರವೇಶ ಮಾಡಿದ ಸಂಸದ ಬಿ.ವೈ.ರಾಘವೇಂದ್ರ

ಹೊಸದಿಗಂತ ವರದಿ,ಶಿವಮೊಗ್ಗ:

ಸಂಸದ ಬಿ.ವೈ.ರಾಘವೇಂದ್ರ ಇನ್ನು ಮುಂದೆ ವಾಟ್ಸಪ್ ಚಾನಲ್‌ನಲ್ಲೂ ಸಾರ್ವಜನಿಕರಿಗೆ ಲಭ್ಯರಾಗುತ್ತಾರೆ. ವಿಜಯದಶಮೀ ಶುಭ‘ ದಿನದಂದು ಈ ಪ್ರಯತ್ನಕ್ಕೆ ಅವರು ಚಾಲನೆ ನೀಡಿದರು. ಅವರ ಕಾರ್ಯಕ್ರಮಗಳು, ಅನಿಸಿಕೆಗಳು, ಹೊಸ ಯೋಜನೆಗಳ ಮಾಹಿತಿ ವಾಟ್ಸಪ್ ಚಾನಲ್‌ನಲ್ಲಿಯೂ ಸಿಗಲಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಸಾಸುವ ಎಲ್ಲ ಅವಕಾಶಗಳನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣದಿಂದ ಹೆಚ್ಚು ಜನರೊಂದಿಗೆ ಏಕಕಾಲದಲ್ಲಿ ಸಂಪರ್ಕ ಸಾಧ್ಯವಾಗಲಿದೆ. ಇದೇ ಕಾರಣಕ್ಕೆ ನಾನು ವಾಟ್ಸಪ್ ಚಾನಲ್ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದೇನೆ. ಇದು ಡಿಟಿಟಲೀಕರಣದ ಯುಗ ಆಗಿರುವುದರಿಂದ ಅದರ ಎಲ್ಲಾ ಆಯಾಮಗಳನ್ನೂ ಬಳಕೆ ಮಾಡಿಕೊಳ್ಳಬೇಕಾಗಿದೆ  ಎಂದರು.

ವಿಮಾನ ನಿಲ್ದಾಣ ಸೇರಿದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಶಿವಮೊಗ್ಗ ಸಾಕಷ್ಟು ಹೆಸರು ಮಾಡಿದೆ. ಶಿವಮೊಗ್ಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ವಾಟ್ಸಪ್ ಚಾನಲ್ ವೇದಿಕೆಯಾಗಲಿದೆ. ಡಿಜಿಟಲೀಕರಣದ ಸದ್ಬಳಕೆಯೊಂದೇ ನನ್ನ ಗುರಿ. ಜನರ ಅಭಿಪ್ರಾಯ ಆಲಿಸಲು ಇದೊಂದು ವೇದಿಕೆಯಾಗಲಿದೆ ಎಂದರು.

ಉದ್ಯಮಿ ಕಿಮ್ಮನೆ ಜಯರಾಂ, ಪರಿಷತ್ ಸದಸ್ಯ ರುದ್ರೇಗೌಡ, ಜಗದೀಶ್, ಅಣ್ಣಪ್ಪ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!