ಕೇರಳದಲ್ಲಿದೆ ದೇಶದಲ್ಲೇ ಅತ್ಯುತ್ತಮ ಕಾನೂನು ಸುವ್ಯವಸ್ಥೆ: ಸಿಎಂ ಪಿಣರಾಯಿ ವಿಜಯನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದಲ್ಲೇ ಅತ್ಯುತ್ತಮವಾದ ಕಾನೂನು ಸುವ್ಯವಸ್ಥೆ (Kerala Law And Order) ಇರುವುದು ಎಂದರೆ ಅದು ಕೇರಳದಲ್ಲಿ . ಕಳೆದ ಕೆಲ ವರ್ಷಗಳಿಂದ ಇಲ್ಲಿ ಯಾವುದೇ ಕೋಮುಗಲಭೆಗಳುನಡೆದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ (Pinarayi Vijayan) ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲೇ ಅತ್ಯುತ್ತಮವಾದ ಕಾನೂನು ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ಕಳೆದ ಕೆಲ ವರ್ಷಗಳಿಂದ ಒಂದೇ ಒಂದು ಕೋಮುಗಲಭೆ (Communal Violence), ಹಿಂಸಾಚಾರವೂ ಅಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ.

ದೇಶದ ಮೊದಲ ಇ-ಆಡಳಿತ (E Governance) ಕೇರಳ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಮೈಲಿಗಲ್ಲು ಸಾಧಿಸಿದೆ. ಇ-ಆಡಳಿತದ ಮೂಲಕ ನಾವು ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಒಳಗೊಳ್ಳುವಿಕೆಯನ್ನು ಸಾಧಿಸುತ್ತಿದ್ದೇವೆ. ತಡೆರಹಿತ ಸಾರ್ವಜನಿಕ ಸೇವೆಗಳನ್ನು ಕಲ್ಪಿಸಲು ತಂತ್ರಜ್ಞಾನವನ್ನ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದೇವೆ. 900ಕ್ಕೂ ಹೆಚ್ಚು ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಅದೇ ರೀತಿ ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 2 ಸಾವಿರ ವೈಫೈ ಹಾಟ್‌ಸ್ಪಾಟ್‌ (WiFi Hotspots) ಸ್ಥಾಪಿಸಲಾಗಿದೆ. ಇದರೊಂದಿಗೆ ಇನ್ನೂ 2,000 ಹಾಟ್‌ಸ್ಪಾಟ್‌ಗಳನ್ನ ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!