Wednesday, November 29, 2023

Latest Posts

ಕೇರಳ ಸರಣಿ ಸ್ಫೋಟ: ಸಿಎಂ ಜೊತೆ ಅಮಿತ್ ಶಾ ಮಾತುಕತೆ, ಎನ್‌ಐಎ-ಎನ್‌ಎಸ್‌ಜಿ ತಂಡ ಸ್ಥಳಕ್ಕೆ ದೌಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ ಎರ್ನಾಕುಲಂನಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಸಭೆ ಗುರಿಯಾಗಿಸಿ ನಡೆದ ಸ್ಪೋಟದತ್ತ ಕೇಂದ್ರ ಸರಕಾರ ತನ್ನ ಗಮನ ಹರಿಸಿದೆ. ಕೂಡಲೇ ಅಲರ್ಟ್‌ ಆದ ಕೇಂದ್ರ ಗೃಹ ಸಚಿವಾಲಯ ಎನ್‌ಎಸ್‌ಜಿ, ಎನ್‌ಐಎ ತಂಡಗಳನ್ನು ಕೇರಳಕ್ಕೆ ಕಳುಹಿಸಿದೆ. ಘಟನೆ ಸಂಬಂಧ ಗೃಹ ಸಚಿವ ಅಮಿತ್ ಶಾ, ಸಿಎಂ ಪಿಣರಾಯಿ ವಿಜಯನ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಅಲ್ಲದೆ, ಕೇಂದ್ರದಿಂದ ಅವಶ್ಯಕವಿರುವ ಎಲ್ಲಾ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

ಸ್ಪೋಟ ಸಂಭವಿಸುವ ಒಂದು ದಿನ ಮುಂಚಿತವಾಗಿ ಕೇರಳದಲ್ಲಿ ಹಮಾಸ್‌ಗೆ ಬೆಂಬಲವಾಗಿ ರ್ಯಾಲಿ ನಡೆಸಲಾಗಿತ್ತು. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಕೇರಳದಲ್ಲಿಯೇ ಇರುವಂತೆ ತನಿಖಾ ಸಂಸ್ಥೆಗಳಿಗೆ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ.

ಬೆಳಗ್ಗೆ 9 ಗಂಟೆಗೆ ಕನ್ವೆನ್ಷನ್ ಸೆಂಟರ್‌ನಲ್ಲಿ ಸತತ ಐದು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಸ್ಫೋಟಗಳಲ್ಲಿ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!