ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಚುನಾವಣಾ ಕಾವು ಶುರುವಾಗಿದ್ದು, ರಾಜಕೀಯ ಪಕ್ಷಗಳು ಹಾಗೂ ಮುಖಂಡರು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಯುವಜನತೆ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವುದರಿಂದ ಅವರನ್ನೇ ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಆರ್‌ಎಸ್ ನಾಯಕಿ ಹಾಗೂ ಎಂಎಲ್‌ಸಿ ಕವಿತಾ ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸಿದರು.
ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ನೆಟ್ಟಿಗರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಕವಿತಾ.. ಚಿರಂಜೀವಿ ಅವರ ಅಭಿಮಾನಿಯಾಗಿ ಅವರ ಬಗ್ಗೆ ಹೇಳಿ ಎಂದು ಕೇಳಿದ್ದಕ್ಕೆ, ಚಿರಂಜೀವಿ ಅವರ ಡೈ ಹಾರ್ಡ್ ಫ್ಯಾನ್ ಎಂದು ಉತ್ತರಿಸಿದ್ದಾರೆ. ಅಲ್ಲದೇ ನಿಮ್ಮ ನೆಚ್ಚಿನ ನಾಯಕ ಯಾರು ಎಂದು ನೆಟಿಜನ್ ಕೇಳಿದಾಗ.. ಚಿರಂಜೀವಿ ಯಾವಾಗಲೂ ನೆಚ್ಚಿನ ನಟ, ಅವರ ಬಳಿಕ ಅಲ್ಲು ಅರ್ಜುನ್ ಎಂದು ಉತ್ತರಿಸಿದ್ದಾರೆ.
ಈ ಮೂಲಕ ಚಿರಂಜೀವಿ ಮತ್ತು ಅಲ್ಲು ಅರ್ಜುನ್ ಬಗ್ಗೆ ಕವಿತಾ ನೀಡಿರುವ ಉತ್ತರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Chiranjeevi always !!!
Next Allu Arjun —- Taggede le https://t.co/ajOqFhqHQ7 pic.twitter.com/ND1z1MdprZ— Kavitha Kalvakuntla (@RaoKavitha) October 28, 2023